ಖಾಸಗಿ ಲಾಡ್ಜ್ ನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ : ಬುರ್ಖಾಧಾರಿ ಮಹಿಳೆಯ ಮೇಲೆ ಅನುಮಾನ -ಕಹಳೆ ನ್ಯೂಸ್
ಮಂಗಳೂರಿನ ಪಂಪ್ವೆಲ್ ಬಳಿಯ ಖಾಸಗಿ ಲಾಡ್ಜೊಂದರಲ್ಲಿ ಬೆತ್ತಲಾಗಿರುವ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸಾವಿನ ಕುರಿತು ಅನುಮಾನ ಮೂಡಿದೆ. ಇನ್ನೂ ಮೃತ ವ್ಯಕ್ತಿ ಕಾಸರಗೋಡು, ಪೈವಳಿಕೆ ಗ್ರಾಮದ, ಚಿಪ್ಪಾರ್ ಪೋಸ್ಟ್ನ ಅಬ್ದುಲ್ ಕರೀಮ್ ತಂದೆ ಮೊಹಮ್ಮದ್ ಬ್ಯಾರಿ, ಎಂದು ತಿಳಿದು ಬಂದಿದೆ. ಮೃತದೇಹ ಪತ್ತೆಯಾದ ರೂಂ ನಲ್ಲಿ ಕೆಲ ಮಾತ್ರೆಗಳು ಪತ್ತೆಯಾಗಿದ್ದು, ಬುರ್ಖಾಧಾರಿ ಮಹಿಳೆಯೊಬ್ಬಳು ಮೃತ ವ್ಯಕ್ತಿಯನ್ನು ಭೇಟಿಯಾಗಿರುವುದಾಗಿ ಕಮೀಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಶಂಕಿತ ಬುರ್ಖಾಧಾರಿ ಮಹಿಳೆಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿಯ ಸಾವು ಹಲವು ಅನುಮಾನಗಳನ್ನು ಮೂಡಿಸಿದೆ. ಘಟನೆಗೆ ಸಂಬ0ಧಿಸಿದ0ತೆ ಪೋಲಿಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆ.