Saturday, January 25, 2025
ಸುದ್ದಿ

ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ ಮೂರನೇ ವಾರ್ಡಿನಲ್ಲಿ 1 ಕೋಟಿ 46 ಲಕ್ಷ ರೂ ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಾ.ವೈ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ ಮೂರನೇ ವಾರ್ಡಿನಲ್ಲಿ 1 ಕೋಟಿ 46 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣ, ರಸ್ತೆ ಅಭಿವೃದ್ಧಿ, ತಡೆಗೋಡೆ ರಚನೆ, ಚರಂಡಿ ನಿರ್ಮಾಣ, ಇಂಟರ್‌ಲಾಕ್ ಅಳವಡಿಕೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮೇಯರ್ ಜಯಾನಂದ್ ಅಂಚನ್, ಸ್ಥಳೀಯ ಕಾರ್ಪೊರೇಟರಾದ ಲೋಕೇಶ್ ಬೊಳ್ಳಾಜೆ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಂಡಲ ಸದಸ್ಯರಾದ ಜಯಕುಮಾರ್ ಗಣೇಶಪುರ, ಶೈಲಜ ಗಣೇಶ್ ಕಟ್ಟೆ, ಶಕ್ತಿಕೇಂದ್ರ ಪ್ರಮುಖ್ ಬಾಲಕೃಷ್ಣ ಸುವರ್ಣ, ಬೂತ್ ಅಧ್ಯಕ್ಷರಾದ ಶಾಂತಕುಮಾರ್ ಶೆಟ್ಟಿಗಾರ್, ಗಿರಿಧರ್ ಶೆಟ್ಟಿ, ಹಾಗೂ ಹೊನ್ನಯ್ಯ ಕೋಟ್ಯಾನ್,ಶೈಲೇಶ್, ಸುನಿಲ್ ಪ್ರಭು, ಸಪ್ನಾ ಸುನಿಲ್, ದಿನೇಶ್ ಶೆಟ್ಟಿ, ಭಗವಾನ್ ದಾಸ್, ಶಶಿಧರ್ ದೇವಾಡಿಗ, ರೋಹಿತ್, ಯಾಧವ ಶೆಟ್ಟಿಗಾರ್, ಎಸ್. ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಪಣಂಬೂರು, ಮುಖಂಡರು, ಕಾರ್ಯಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.