
ಉಡುಪಿ : ಉಡುಪಿಯಲ್ಲಿ ವಿಶ್ವಹಿಂದೂ ಪರಿಷದ್ ಆಯೋಜಿಸಿರು ಧರ್ಮ ಸಂಸದ್ ಕಾರ್ಯಕ್ರಮದ ಪೂರ್ವಭಾವಿಯಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾಪು ಪ್ರಿಂಟ್ ವತಿಯಿಂದ ಕಾರ್ಯಕರ್ತರ ಸಮಾವೇಶವು ದಿನಾಂಕ 8.10.2017 ರಂದು,ಕಾಪು ಹಳೆ ಮಾರಿಗುಡಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಂ.ಬಿ. ಪುರಾಣಿಕ್, ಗೋಪಾಲಕೃಷ್ಣ ಬೈಂದೂರು, ಶರಣ್ ಪಂಪ್ವೆಲ್, ವಿಲಾಸ್ ನಾಯಕ್, ಸುನೀಲ್ ಕೆ ಅರ್, ದಿನೇಶ್ ಮೆಂಡನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕು ಮುನ್ನುಡಿ ಕೊಡಮಣಿತ್ತಾಯ ಬಬ್ಬರ್ಯ ದೇವಸ್ಥಾನ ಮೂಳೂರಿನಿಂದ ಮಾರಿಗುಡಿ ಸಭಾಭವನದವರೆಗೆ ಬೃಹತ್ ಬೈಕ್ ಜಾಥ ನಡೆಯಲಿದೆ. ಬೈಕ್ ಹಾರವನ್ನು ಸಂಘ ಚಾಲಕರಾದ ತಾರಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ.