ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯ ಪಾರ್ಲಿಮೆಂಟ್ನಲ್ಲಿ ಭೇಟಿಯಾದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ : ಹಲವು ಯೋಜನೆಗಳ ಬಗ್ಗೆ ಮಾತುಕತೆ –ಕಹಳೆ ನ್ಯೂಸ್
ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು ಇಂದು ಇಂದು ದೆಹಲಿಯ ಪಾರ್ಲಿಮೆಂಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲುರವರು ದೆಹಲಿಯ ಪಾರ್ಲಿಮೆಂಟ್ನಲ್ಲಿ ಮೋದಿಯವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ್ದು, ಈ ವೇಳೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಯೋಜನೆ ಮತ್ತು ಯೋಚನೆಗಳನ್ನು ಮೋದಿಜೀಯವರಿಗೆ ವಿವರಿಸಿಲಾಗಿದೆ.
ಬಳಿಕ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಆಧರಣೀಯ ಮತ್ಸ್ಯ ದೇವತೆಯ ಸ್ಮರಣಿಕೆಯನ್ನು ಜಿಲ್ಲೆಯ ಜನತೆಯ ಪರವಾಗಿ ಸನ್ಮಾನ್ಯ ಪ್ರಧಾನಮಂತ್ರಿಯವರಿಗೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು ನೀಡಿದರು. ಅತ್ಯಂತ ಸಂತೋಷದಿAದ ಇದನ್ನ ಪ್ರಧಾನಿ ನರೇಂದ್ರ ಮೋದಿಯವರು ಸ್ವೀಕರಿಸಿದ್ದಾರೆ.