ಆಕಸ್ಮಿಕವಾಗಿ ಖಾತೆಗೆ ಬಂತು 4.26 ಕೋಟಿ ರೂ. : ಹಣ ಖರ್ಚು ಮಾಡಿ ದುಬಾರಿ ಜೀವನ ನಡೆಸಿದಾತನಿಗೆ ಜೈಲು ಶಿಕ್ಷೆ.! -ಕಹಳೆ ನ್ಯೂಸ್
ನವದೆಹಲಿ: ಯಾರೋ ಆಕಸ್ಮಿಕವಾಗಿ ಬ್ಯಾಂಕ್ ಖಾತೆಗೆ ಹಾಕಿದ ಹಣವನ್ನು ಖರ್ಚು ಮಾಡಿದ ಪರಿಣಾಮ ಯುವಕನೊಬ್ಬ ಜೈಲು ಶಿಕ್ಷೆಯನ್ನು ಅನುಭವಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ರ‍್ಯಾಪರ್ ಆಗಿರುವ 24 ವರ್ಷದ ಅಬ್ದೆಲ್ ಘಾಡಿಯಾ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ತಾರಾ ಥಾರ್ನೆ ಆಕೆಯ ಪತಿ ಕೋರಿ ಸಿಡ್ನಿಯಲ್ಲಿ ತಾವೊಂದು ಮನೆ ಖರೀದಿಸಬೇಕೆಂದು ಸೇವಿಂಗ್ಸ್ (4.26 ಕೋಟಿ ರೂ.) ಹಣವನ್ನು ಕೂಡಿರುತ್ತಾರೆ. ದಲ್ಲಾಳಿಯಾಗಿರುವ ಆಡಮ್ ಮ್ಯಾಗ್ರೋ ಎನ್ನುವವರ ಜೊತೆ ವ್ಯವಹಾರ ಮಾಡಲು ಶುರು ಮಾಡುತ್ತಾರೆ. ಆದರೆ ಕೆಲ ದಿನಗಳ ಬಳಿಕ ಆಡಮ್ ಮ್ಯಾಗ್ರೋ ಅವರ ಇಮೇಲ್ ಹ್ಯಾಕ್ ಆಗಿದೆ ಎಂದು ದಂಪತಿಗೆ ತಿಳಿಯುತ್ತದೆ.
ತಾವು ಕಳುಹಿಸಿದ ಹಣ ಅಬ್ದೆಲ್ ಘಾಡಿಯಾ ಅವರ ಖಾತೆಗೆ ಜಮಾವಣೆಯಾಗಿರುತ್ತದೆ. ಅಬ್ದೆಲ್ ಘಾಡಿಯಾ ಈ ಹಣವನ್ನು ದುಬಾರಿ ಬಟ್ಟೆ ಹಾಗೂ ಚಿನ್ನದ ಬಿಸ್ಕೆಟ್ ಗಳನ್ನು, ಮೇಕಪ್ ಐಟಂಗಳನ್ನು ಖರೀದಿಸುತ್ತಾನೆ. ಇದೇ ದುಡ್ಡಿನಲ್ಲಿ ಆತ ಹಾಡುಗಳನ್ನು ಮಾಡುತ್ತಾನೆ. ಆಕಸ್ಮಿಕವಾಗಿ ಹಣವನ್ನು ಯಾರೋ ಹಾಕಿದ್ದಾರೆಂದು ಭಾವಿಸಿ ಎಲ್ಲವನ್ನೂ ಖರ್ಚು ಮಾಡಿ ಐಷಾರಾಮಿ ಜೀವನವನ್ನು ಸಾಗಿಸಿದ ಅಬ್ದೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಟರಿನ ಮುಂದೆ ಹಾಜರ್ ಪಡಿಸಿದ್ದು, ಆತನಿಗೆ 18 ತಿಂಗಳು ಜೈಲು ಶಿಕ್ಷೆಯನ್ನು ನೀಡಿಯೆಂದು ಕೋರ್ಟ್ ತೀರ್ಪು ನೀಡಿದೆ.