Tuesday, January 28, 2025
ಸುದ್ದಿ

ಬಂದಾರು ಗ್ರಾ ಪಂ ಉದ್ಯೋಗ ಖಾತ್ರಿಯ ಡಾಟಾ ಎಂಟ್ರಿ ಸಿಬ್ಬಂದಿ ಲಲಿತ ಇಂದು ನಿಧನ : ಜನಸ್ನೇಹಿ ಜೀವದ ಅಗಲುವಿಕೆಗೆ ಕಂಬನಿ ಮಿಡಿದ ಊರಿನ ಜನತೆ -ಕಹಳೆ ನ್ಯೂಸ್

ಬಂದಾರು ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿಯ ಡಾಟಾ ಎಂಟ್ರಿ ಸಿಬ್ಬಂದಿ, ಮೊಗ್ರು ಗ್ರಾಮದ ನಾಯಿಮಾರು ಲಲಿತ (38) ಇವರು ಅನಾರೋಗ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ವಿಧಿವಿಶರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂದಾರು ಗ್ರಾಮ ಪಂಚಾಯತ್‌ನಲ್ಲಿ 14 ವರ್ಷ ಸೇವೆ ಸಲ್ಲಿಸಿರುವ ಇವರು ಜನರ ಜೊತೆ ನಗುಮೊಗದ ಜನಸ್ನೇಹಿ ಕೆಲಸ ಕಾರ್ಯದಲ್ಲಿ ನಿರತರಾಗಿ, ಅಪಾರ ಜನರ ಪ್ರೀತಿ ಪಾತ್ರರಾಗಿದ್ದರು.

ಗ್ರಾ.ಪಂ ಅಧ್ಯಕ್ಷರಾದ ಪರಮೇಶ್ವರಿ ಗೌಡ,ಉಪಾಧ್ಯಕ್ಷರಾದ ಗಂಗಾಧರ,ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ,ಗ್ರಾ.ಪಂ ಸದಸ್ಯರು ಸಿಬ್ಬಂದಿ ವರ್ಗ ಊರಿನ ಗಣ್ಯರು ಸಂತಾಪ ಸಲ್ಲಿಸಿದರು. ಇನ್ನು ಮೃತರು ಪತಿ ಲವ, ಇಬ್ಬರು ಗಂಡು ಮಕ್ಕಳಾದ ಸ್ವಸ್ಥಿಕ್, ಸಾಕ್ಷಿತ್ ಇವರನ್ನು ಅಗಲಿದ್ದಾರೆ..