Recent Posts

Monday, January 27, 2025
ಸುದ್ದಿ

ಕಳ್ಳರಿದ್ದಾರೆ ಎಚ್ಚರ..! : ಬಂಟ್ವಾಳದಲ್ಲಿ ಮನೆಗೆ ನುಗ್ಗಿ 12.40ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳವು –ಕಹಳೆ ನ್ಯೂಸ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ನಿಶಾಭಾಗ್ ಸಮೀಪದ ಮನೆಯೊಂದರಲ್ಲಿ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ನಿಶಾಭಾಗ್ ನಿವಾಸಿಯಾಗಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಅಬ್ಬಾಸ್ ಅವರ ಮನೆಗೆ ನುಗ್ಗಿದ ಕಳ್ಳರು ಸುಮಾರು ಒಟ್ಟು 12.40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿ ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 13 ರಂದು ಮಧ್ಯಾಹ್ನ 2.30 ರಿಂದ ರಾತ್ರಿ 8.10 ರೊಳಗೆ ಕಳವು ಕೃತ್ಯ ನಡೆದಿರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಮಧ್ಯಾಹ್ನ ಮನೆಯವರು 2.30 ಕ್ಕೆ ಸಂಬAಧಿಕರ ಮನೆಗೆ ಹೋಗಿ ವಾಪಸ್ ರಾತ್ರಿ 8.10 ರ ಸುಮಾರಿಗೆ ವಾಪಸ್ ಬಂದಾಗ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ನಜೀಬ್ ಅವರ ತಾಯಿ ಮಲಗುವ ಕೋಣೆಯಲ್ಲಿದ್ದ ಕಪಾಟಿನ ಸೇಫ್ ಲಾಕರನ್ನು ಆಯುಧದಿಂದ ಕಟ್ ಮಾಡಿದ ಕಳ್ಳರು ಅವರ ಮಿನಿ ಪರ್ಸ್ನಲ್ಲಿದ್ದ 1.40 ಲಕ್ಷ ರೂಪಾಯಿ ನಗದು, 3 ಪವನ್ ತೂಕದ 3 ಕೈ ಬಳೆಗಳು, ತಲಾ ಒಂದು ಪವನ್ ತೂಕದ 3 ಉಂಗುರಗಳು, 7 ಪವನ್ ತೂಕದ ಚಿನ್ನದ ಚೈನ್, ನಜೀಬ್ ಅವರ ಕೋಣೆಯ ಕಪಾಟಿನಲ್ಲಿದ್ದ ಸೇಫ್ ಲಾಕರ್ ಮುರಿದು 4 ಪವನ್ ತೂಕದ ಮಾಲೆ, 5 ಪವನ್ ತೂಕದ ಕೈ ಬಳೆ ಸಹಿತ ಇತರ ಚಿನ್ನಾಭರಣ ಸೇರಿ ಒಟ್ಟು 36 ಪವನ್ ತೂಕದ ಚಿನ್ನಾಭರಣ ಕಳವು ನಡೆಸಿದ್ದಾರೆ.

ಕಳ್ಳರು ಮನೆಯ ಮೇಲಿನ ಮಹಡಿಯ ಹಿಂಬದಿಯ ಬಾಗಿಲನ್ನು ಮುರಿದು ಒಳ ನುಗ್ಗಿದ್ದು, ಕಳವಾದ ಚಿನ್ನದ ಮೌಲ್ಯದ 11 ಲಕ್ಷ ರೂಪಾಯಿ, 1.40 ಲಕ್ಷ ರೂಪಾಯಿಯ ನಗದು ಸೇರಿ ಒಟ್ಟು 12.40 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಈ ಕುರಿತು ಮನೆ ಮಾಲಕರಾದ ಎಸ್.ಅಬ್ಬಾಸ್ ಅವರ ಪುತ್ರ ಮೊಹಮ್ಮದ್ ನಜೀಬ್ ಅವರು ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.