Recent Posts

Monday, November 25, 2024
ಸುದ್ದಿ

ಹೈಕೋರ್ಟ್‌ನಲ್ಲಿ ವಿವಾದ ಅಂತ್ಯ:ಮರೀನಾ ಬೀಚ್‌ನಲ್ಲೇ ಕರುಣಾ ಸಮಾಧಿ – ಕಹಳೆ ನ್ಯೂಸ್

ಚೆನ್ನೈ: ಮರೀನಾ ಬೀಚ್‌ನಲ್ಲಿ ಡಿಎಂಕೆ ಅಧಿನಾಯಕ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ತಮಿಳುನಾಡು ಹೈಕೋರ್ಟ್‌ ಅನುಮತಿ ನೀಡಿದ್ದು. ಅವಕಾಶ ನೀಡಲು ನಿರಾಕರಿಸಿದ್ದ ತಮಿಳುನಾಡು ಎಐಎಡಿಎಂಕೆ ಸರ್ಕಾರಕ್ಕೆ ಮುಖಭಂಗವಾಗಿದೆ. 

ಅಣ್ಣಾ ದೊರೈ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಡಿಎಂಕೆ ಎಂದು ಮನವಿ ಮಾಡಿತ್ತು. ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮರೀನಾ ಬೀಚ್‌ನಲ್ಲಿ  ಸಮಾಧಿ ಮಾಡಲು ಅವಕಾಶ ನೀಡಬಾರದು ಎಂದು ಟ್ರಾಫಿಕ್‌ ರಾಮಸ್ವಾಮಿ ಸೇರಿದಂತೆ ಐವರು ಹೈ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಐವರೂ ಅರ್ಜಿಗಳನ್ನು ವಾಪಾಸ್‌ ಪಡೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿವಾದದ ಕುರಿತು  ಮಂಗಳವಾರ ಮಧ್ಯರಾತ್ರಿವರೆಗೂ ವಿಚಾರಣೆ ನಡೆಯಿತಾದರೂ ಯಾವುದೇ ಆದೇಶ ಹೊರಬೀಳದೆ ಬುಧವಾರ ಬೆಳಗ್ಗೆ 8 ಗಂಟೆಗೆ ವಿಚಾರಣೆ ಮುಂದೂಡಿಕೆಯಾಗಿತ್ತು.

ಕರ್ನಾಟಕ ಮೂಲದ ಹಂಗಾಮಿ ಸಿಜೆ ಹುಲುವಾಡಿ ಜಿ.ರಮೇಶ್‌ ನಿವಾಸದಲ್ಲಿ ರಾತ್ರಿ ವಿಚಾರಣೆ ನಡೆಯಿತು. ಹೈಕೋರ್ಟ್‌ನಲ್ಲಿ  ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಅರ್ಜಿ ವಿಚಾರಣೆ ಸುಧೀರ್ಘ‌ 2 ಗಂಟೆಗಳ ಬಳಿಕ ತೀರ್ಪು ಹೊರ ಬಂದಿದೆ.

ತೀವ್ರ ಆಕ್ರೋಶ ಗೊಂಡಿದ್ದ ಡಿಎಂಕೆ ಕಾರ್ಯಕರ್ತರು !

ಮರೀನಾ ಬೀಚ್‌ನಲ್ಲಿ ಅವಕಾಶ ನೀಡದ ಸರ್ಕಾರದ ವಿರುದ್ಧ ಡಿಎಂಕೆ ಕಾರ್ಯಕರ್ತರು ವ್ಯಾಪಕ ಆಕ್ರೋಶ ಹೊರ ಹಾಕಿದ್ದರು. ಕೋರ್ಟ್‌ ತೀರ್ಪು ಸರ್ಕಾರದ ಪರವಾಗಿ ಬಂದಿದ್ದರೆ ಹಿಂಸಾಚಾರ ನಡೆಯುವ ಸಾಧ್ಯತೆಗಳು ಇದ್ದವು. ಆದರೆ ಕೋರ್ಟ್‌ ನೀಡಿರುವ ತೀರ್ಪು ಡಿಎಂಕೆ ಕಾರ್ಯಕರ್ತರಿಗೆ ನೋವಿನಲ್ಲು ಖುಷಿ ತಂದಿದೆ.

ವ್ಯಾಪಕ ಕಟ್ಟೆಚ್ಚರ 
ಮರೀನಾ ಬೀಚ್‌ನಲ್ಲಿ  ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಿ , ಸಮಾಧಿ ಕಾರ್ಯಕ್ಕೆ ಬೇಕಾಗಿರುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.