ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ಗೌರವ –ಕಹಳೆ ನ್ಯೂಸ್
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ ‘ಭಾರತ ರತ್ನ ಪ್ರಣಬ್ ಮುಖರ್ಜಿ ಭಾರತದ ದೂರದೃಷ್ಟಿಯ ಕುಲಪತಿ: 2022’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗಳನ್ನು ಗುರುತಿಸಿ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಗಮನಿಸಿ “ರಿಥಿಂಕ್ ಇಂಡಿಯಾ- ರಾಷ್ಟ್ರೀಯ ಉತ್ಕೃಷ್ಟತೆಗಾಗಿ ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರದ ಸಹಯೋಗದಲ್ಲಿ ಅಸಂಖ್ಯಾತ ಕ್ರಿಯಾಶೀಲ ಸಮುದಾಯಗಳನ್ನು ಪೋಷಿಸುವ ವೇದಿಕೆ” .
ಮಂಗಳೂರು ವಿವಿಯ ಕುಲಪತಿಗೆ ಈ ಗೌರವ ಸಲ್ಲಿಸಿದೆ. ಡಿ.5ರಂದು ಸಿವಿಲ್ ಸರ್ವಿಸಸ್ ಆಫೀಸರ್ಸ್ ಇನ್‌ಸ್ಟಿಟ್ಯೂಟ್, ವಿನಯ್ ಮಾರ್ಗ್, ಚಾಣಕ್ಯಪುರಿ, ನವದೆಹಲಿಯಿಂದ ಡ್ಯುಯಲ್ ಮೋಡ್‌ನಲ್ಲಿ (ಆನ್‌ಲೈನ್ ಮತ್ತು ಭೌತಿಕ) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಆನ್‌ಲೈನ್ ಮೋಡ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.