Thursday, January 23, 2025
ಸುದ್ದಿ

ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ನಡೆದ ನ್ಯಾಕ್ ಕುರಿತು ಪೂರ್ವ ಸಿದ್ಧತಾ ಕಾರ್ಯಗಾರ – ಕಹಳೆ ನ್ಯೂಸ್

ಮಂಗಳೂರು: ಕಾಲೇಜು ಪ್ರಗತಿ ಹೊಂದಬೇಕಾದರೆ ನ್ಯಾಕ್ ನ ಮಾನ್ಯತೆ ಅಗತ್ಯ ಮತ್ತು ಸಹಕಾರಿಯಾಗಿದೆ ಎಂದು ಶಾಸಕಡಿ. ವೇದವ್ಯಾಸ್ ಕಾಮತ್ ಅವರು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ನಡೆದ ನ್ಯಾಕ್ ಕುರಿತು ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಕಾಲೇಜು ನ್ಯಾಕ್ ಪ್ರಕ್ರಿಯೆಗೆ ಒಳಪಡಬೇಕು. ಇದರಿಂದ ಸರಕಾರದಿಂದ ಹೆಚ್ಚಿನ ಅನುದಾನ ತರಲು ಸಹಕಾರಿಯಾಗಿದೆ. ಎಲ್ಲಾ ಅಧ್ಯಾಪಕರೂ ಜವಬ್ದಾರಿ ಹೆಚ್ಚಿಸಿಕೊಂಡು ಶ್ರಮಿಸಿ, ಹಳೆ ವಿದ್ಯಾರ್ಥಿಗಳು ಮತ್ತು ಪೆÇೀಷಕರಿಗೆ ಆಹ್ವಾನ ನೀಡು ಕಾಲೇಜಿನ ಕುರಿತು ಸಕಾರಾತ್ಮಕ ಅಭಿಪ್ರಾಯಗಳನ್ನು ನ್ಯಾಕ್ ತಂಡದ ಮುಂದೆ ಹಂಚಿಕೊಳ್ಳಲು ತಿಳಿಸಿ ಎಂದರು.

ನ್ಯಾಕ್ ತಂಡ ಪರಿಶೀಲನೆಗೆ ಬಂದು ಹೋಗುವ ವರೆಗೂ ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಿ. ನಾವೆಲ್ಲರೂ ಜೊತೆಯಾಗಿ ಈ ಕೆಲಸ ಮಾಡೋಣ. ಮುಂದಿನ ದಿನಗಳಲ್ಲಿ ಕಾಲೇಜು ಎತ್ತರಕ್ಕೆ ಬೆಳೆಯಲಿ, ಸ್ನಾತಕೋತ್ತರ ಕೋರ್ಸ್ ಗಳನ್ನು ಆರಂಭಿಸಲು ಶಾಸಕರು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನೆರವು ನೀಡುವ ಭರವಸೆ ನೀಡಿದರು.

ಸಭೆಯಲ್ಲಿ ಸಿ.ಡಿ.ಸಿ ಸದಸ್ಯರಾದ ಶ್ರೀ ಮಂಜುನಾಥ್, Iಕಿಂಅ ಸಂಚಾಲಕರಾದ ಡಾ. ಚಂದ್ರಶೇಖರ ಕೆ. ಸಹಸಂಚಾಲಕರಾದ ಡಾ. ನಯನ ಎಲ್.ಎಂ, ಡಾ. ಜಗದೀಶ್ ಬಾಳ, ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.