Friday, September 20, 2024
ಸುದ್ದಿ

`ಮುಳಿಯ ಕೃಷಿಕೋತ್ಸವ’ದಲ್ಲಿ ತೆಂಗಿನ ಕೃಷಿಯ ಮಾಹಿತಿ ಹಾಗೂ ಸಂವಾದ ವಿಶೇಷ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ದಿಗ್ದರ್ಶಕ ಮುಳಿಯ ಶ್ಯಾಮ ಭಟ್ ಉದ್ಘಾಟಿಸಿದರು – ಕಹಳೆ ನ್ಯೂಸ್

ಪುತ್ತೂರು, ಆ. 7: ಸ್ವರ್ಣೋದ್ಯಮದ ಪ್ರತಿಷ್ಟಿತ ಮುಳಿಯ ಜುವೆಲ್ಸ್ ಸಂಸ್ಥೆ ತಮ್ಮ ಸಾಮಾಜಿಕ ಚಟುವಟಿಕೆಯ ಬಗವಾಗಿ ಕೃಷಿಕರಿಗೆ ಬೆಂಬಲವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮಂಗಳವಾರ ಮುಳಿಯ ಕೃಷಿಕೋತ್ಸವದಲ್ಲಿ ತೆಂಗಿನ ಕೃಷಿಯ ಮಾಹಿತಿ ಹಾಗೂ ಸಂವಾದ ವಿಶೇಷವಾಗಿ ಗಮನ ಸೆಳೆಯಿತು.

ತೆಂಗಿನ ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಹೊಸ ಪ್ರಯೋಗಗಳ ಕುರಿತು ಬೆಳೆಗಾರರೊಂದಿಗೆ ತೆರೆದಿಡುವ ಮಹತ್ವದ ಉದ್ದೇಶದೊಂದಿಗೆ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ದಿಗ್ದರ್ಶಕ ಮುಳಿಯ ಶ್ಯಾಮ ಭಟ್ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಂತರ ನಡೆದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆ ತಜ್ಞ ಪುರಂದರ್ ಕುಬಣೂರು ಮಾತನಾಡಿ, ಕೃಷಿ ಹೃದಯಗಳನ್ನು ಬೆಸೆಯುವ ಮಹತ್ವದ ಕೆಲಸವನ್ನು ಇಂದು ಮುಳಿಯ ಸಂಸ್ಥೆ ಮಾಡುತ್ತಿದೆ. ಮಣ್ಣಲ್ಲಿ ಮಣ್ಣಾಗಿ ಕೆಲಸ ಮಾಡಿದರೆ ಮಾತ್ರ ಕೃಷಿಯಲ್ಲಿ ಫಲ ಉಣ್ಣಲು ಸಾದ್ಯ. ತೆಂಗನ್ನು ಕಲ್ಪವೃಕ್ಷ ಎಂದು ಪರಿಗಣಿಸಿದರೂ ಅದನ್ನು ನಾವು ಸರಿಯಾಗಿ ಬಳಸಿಲ್ಲ. ಸಂಬಂದಪಟ್ಟ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಮೌಲ್ಯವರ್ನೆಯ ಸಾದ್ಯತೆಯ ಕಡೆಗೆ ನಾವು ಗಮನಹರಿಸಬೇಕು ಎಂದರು.

ಜಾಹೀರಾತು

ಆರಂಭಿಕ ಪೋಷಣೆ ಅಗತ್ಯ :

ಸಿಪಿಸಿಆರ್‍ಐ ಕ್ರಾಪ್ ಪೆÇ್ರಡಕ್ಷನ್ ವಿಜ್ಞಾನಿ ಮುಖ್ಯಸ್ಥ ಡಾ| ರವಿ `Àಟ್ ಅವರು ತೆಂಗಿನ ಸಾ`À್ಯತೆ, ತೋಟ ನಿರ್ವಹಣೆಗೆ ಕುರಿತು ಮಾತನಾಡಿ, ತೆಂಗನ್ನು ವೈಜ್ಞಾನಿಕವಾಗಿ ಬೆಳೆಯಲು ಏನೇನು ಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕು. ಬಹುವಾರ್ಷಿಕ ಬೆಳೆಯಾಗಿರುವ ತೆಂಗು ಕಾಯಿ ಬಿಡಲು 3 ವರ್ಷ ಬೇಕು. ಈ ಅವ„ಯಲ್ಲಿ ಸರಿಯಾದ ಪೆÇೀಷಣೆ ಆಗದಿದ್ದರೆ ಬೆಳವಣಿಗೆ ಕುಂಠಿತವಾಗುತ್ತದೆ. ಆರಂ`Àದ ಬೆಳವಣಿಗೆ ಉತ್ತಮವಾಗಿದ್ದರೆ 50 ವರ್ಷದವರೆಗೆ ಲಾ`Àದಾಯಕ ಬೆಳವಣಿಗೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಉತ್ತಮ ತಳಿಯನ್ನೂ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ ಅವರು ತೆಂಗಿನ ಜತೆ, ಉಪ ಬೆಳೆ, ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು ಎಂದರು.

ಬ್ರ್ಯಾಂಡ್ ಮ್ಯಾನೇಜ್‍ಮೆಂಟ್ ಕನ್ಸಲ್‍ಟೆಂಟ್ ವೇಣು ಶರ್ಮಾ ಮಾತನಾಡಿ, ತೆಂಗಿಗೆ ಸಂಬಂ`Àಪಟ್ಟಂತೆ ಮಾತ್ರ ಕಾಯಿರ್ ಬೋರ್ಡ್, ತೆಂಗು ಬೋರ್ಡ್, ಸಿಪಿಸಿಆರ್‍ಐನಂತಹ ವಿವಿ`À ಸಂಸ್ಥೆಗಳಿವೆ. ಸೀಸನ್‍ಗೆ ಪ್ರಯೋಜವಾಗುವಂತೆ ಸೀಯಾಳ ವ್ಯಾಪಾರ, ಜಗತ್ಪ್ರಸಿದ್ಧವಾಗಿರುವ ಕೋಕೋನಟ್ ಚಾಕಲೇಟು, ಬೋಂಡಾ ಫ್ಲೇವರ್ ನೀರು, ಕಾಫಿ ಡೇ ನಂತೆ ಬೋಂಡಾ ಡೇ ಗಳಂತೆ ಮೌಲ್ಯವಧರ್ನೆಯ ಕಡೆಗೆ ಮುನ್ನಡೆದಾಗ ತೆಂಗು ಬೆಳೆ ಗುರುತಿಸಿಕೊಳ್ಳಲು ಸಾದ್ಯ ಎಂದರು.

ಕೃಷಿಯಂತೆ ಮಾತ್ರ ನೋಡಬೇಡಿ

ಸಿಪಿಸಿಆರ್‍ಐನ ಜೀವ ರಸಾಯನಶಾಸ್ತ್ರ ತಂತ್ರಜ್ಞಾನ ವಿ`Áಗದ ಮುಖ್ಯಸ್ಥ ಡಾ| ಕೆ.ಬಿ. ಹೆಬ್ಬಾರ್ ಮಾತನಾಡಿ, ಕೃಷಿಯನ್ನು ಕೇವಲ ಕೃಷಿಯಂತೆ ನೋಡದೆ ಇತರ ಉದ್ದೇಶದಿಂದಲೂ ನೋಡಬೇಕು. ಕಳೆದ 4 ವರ್ಷಗಳಿಂದಷ್ಟೇ `Áರತದಲ್ಲಿ ತೆಂಗಿನ ಮೌಲ್ಯವರ್„ತ ವಸ್ತುಗಳಿಗೆ ಹೆಚ್ಚಿನ ಆ`À್ಯತೆ ನೀಡಲಾಗಿದೆ. ದೇಶದಲ್ಲಿ ಬೊಂಡದ ನೀರಿಗೆ 135 ಶೇ. ದಷ್ಟು ಬೇಡಿಕೆ ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಅಷ್ಟು ಪ್ರಮಾಣದ ಎಳನೀರು ಕಾಯಿ ಉತ್ಪಾದನೆಯಾಗುತ್ತಿಲ್ಲ. 2022 ರ ಅವ„ಗೆ ತೆಂಗು ಕ್ಷೇತ್ರವನ್ನು ಬೆಳೆಸಲು ಇಲಾಖೆಗಳಿಗೂ ಕೇಂದ್ರ ಸರಕಾರದಿಂದ ಸೂಚನೆ ಇದೆ ಎಂದು ಹೇಳಿದರು.
ಚಿಟ್ಡ oಠಿZ್ಟಠಿ
ಬೊಂಡ ಐಸ್‍ಕ್ರೀಂ ಕಾಮತ್
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಬೊಂಡ ಐಸ್‍ಕ್ರೀಂನ ಕಾಮತ್ ಎಂದು ಹೆಸರಾಗಿರುವ ನಿವೃತ್ತ ಪ್ರಾ`Á್ಯಪಕ ಸೀತಾರಾಮ ಕಾಮತ್ ಅವರು ಪ್ರಾತ್ಯಕ್ಷಿಕೆಯ ಬೊಂಡವನ್ನು ಬಳಸಿಕೊಂಡು ವಿವಿ`À ಫ್ಲೇವರ್‍ಗಳ ಐಸ್‍ಕ್ರೀಂ ತಯಾರಿಸುವ ಕುರಿತು ತಿಳಿಸಿದರು. ಮನುಷ್ಯನ ಶರೀರಕ್ಕೆ ಬೇಕಾದ 22 ಮಿನರಲ್ ಕಂಟೆಂಟ್ ಬೊಂಡದಲ್ಲಿದೆ. ಕಾರ್ಮಿಕನ ಕೆಲಸವನ್ನು ನಮ್ಮ ಸಮಾಜ ಒಪ್ಪುವುದಿಲ್ಲ ಎನ್ನುವ `À್ರಮೆಯೇ ನಮ್ಮನ್ನು ಹಿಂದುಳಿಯುವಂತೆ ಮಾಡಿದೆ ಎಂದರು.

ಚಿಟ್ಡ ಛ್ಞಿb
ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಜ್ಞರೊಂದಿಗೆ ಕೃಷಿಕರು ಸಂವಾದ ನಡೆಸಿದರು. ರಾ`Áಕೃಷ್ಣ ಬೆಟ್ಟಂಪಾಡಿ, ಡಾ| ರಾಜೇಶ್ ಬೆಜ್ಜಂಗಳ, ಡಾ| ನರೇಂದ್ರ ರೈ ದೇರ್ಲ ಸೇರಿದಂತೆ ಹಲವು ಮಂದಿ ಸಂವಾದದಲ್ಲಿ ಪಾಲ್ಗೊಂಡರು.

ಪ್ರಮುಖ ಅಂಶಗಳು
*ಎಳನೀರಿನ ಮೌಲ್ಯವ`ರ್Àನೆಯ ಸಂದ`ರ್Àದಲ್ಲೂ ಕಳಬೆರಕೆ ಆದರೆ ಎಂಬ ಪ್ರಶ್ನೆಗೆ, ಇಂತಹ ಸಂದ`ರ್Àದಲ್ಲಿ ಸಿಪಿಸಿಆರ್‍ಐನಲ್ಲೂ ಪರಿಶೀಲನೆಯ ವ್ಯವಸ್ಥೆ ಇದೆ ಎನ್ನುವ ಉತ್ತರ ಲಭಿಸಿತು.
*ತೆಂಗಿನ ಕಾಯಿಯಿಂದ ಹಾಲು -ಮೊಸರು ತಯಾರಿಸುವ ಕುರಿತ ಪ್ರಶ್ನೆಗೆ ಈ ಕುರಿತು ಇನ್ನೂ ಸಂಶೋ`Àನೆಗಳು ನಡೆದಿಲ್ಲ, ಆದರೆ ವಿದೇಶಗಳಲ್ಲಿ ಹಾಲು, ಮೊಸರಿನ ಬೇರೆ ರೀತಿಯಲ್ಲಿ ಬಳಕೆಯಾಗುತ್ತಿದೆ ಎನ್ನುವ ಉತ್ತರ ಲಭಿಸಿತು.
*ಹಾಸನದ ಗಂಗಾಪಾನಿ ಸೀಯಾಳ 21 ದಿನ ಬಾಳಿಕೆ ಬರುತ್ತದೆ ಎನ್ನುವ ಕುರಿತು ಅ`À್ಯಯನ ನಡೆದಿಲ್ಲ. ಮುಂದಿನ ದಿನಗಳಲ್ಲಿ ಪರಿಗಣಿಸಬಹುದು.
*ತೆಂಗಿನ ಮರದಿಂದ ಎಳನೀರನ್ನಾದರೆ 200 ತೆಗೆಯಬಹುದು, ಆದರೆ ಒಣ ತೆಂಗಿನಕಾಯಿಯ 100 ಮಾತ್ರ ಸಿಗುವ ಸಾ`À್ಯತೆ ಇರುತ್ತದೆ ಎಂಬುದು ಸಂಶೋ`Àನೆಯಿಂದ ಸಾಭೀತಾಗಿದೆ ಎಂದು ವಿಜ್ಞಾನಿ ತಿಳಿಸಿದರು.
*ತೆಂಗಿನ ಸಿರಿಗೆ ಕಾಡುವ ಕರುವಾಯಿ ಕೀಟ ಗೊಬ್ಬರದ ಮೂಲಕ ಬರುತ್ತದೆ. ಇದನ್ನು ಆರಂ`Àದಲ್ಲೇಗುರುತಿಸುವ ಕ್ರಮದೊಂದಿಗೆ ನಿಯಂತ್ರಿಸುವ ಅಗತ್ಯವಿದೆ.
*ತೆಂಗಿನ ಮರದ ಬುಡಕ್ಕೆ ಉಪ್ಪು ಹಾಕುವ ಅಗತ್ಯವಿಲ್ಲ.
* ಕೇಂದ್ರ ಸರಕಾರದಿಂದ ತೆಂಗು ಬೆಳೆಗೆ ಪೆÇ್ರೀತ್ಸಾಹ ಯೋಜನೆ
*ಕೆಂದಾಳೆ ಔಷ„ೀಯ ಗುಣ ಹೊಂದಿದೆ ಎನ್ನುವ ಕುರಿತು ಸಂಶೋ`Àನೆ ಸಾಭೀತುಪಡಿಸಿಲ್ಲ, ಆದರೆ ಕ್ಯಾನ್ಸರ್‍ನ ಕಿಮೋಥೆರಫಿಯ ಬಳಿಕ ಸು`Áರಿಸಲು ಔಷ„ಯಾಗಿ ಬಳಸಲಾಗುತ್ತಿದೆ ಎನ್ನುವ ಕುರಿತು ಚರ್ಚೆ ನಡೆಯಿತು.
ಅಡಿಕೆ ಪತ್ರಿಕೆ ಸಂಪಾದಕ ನಾ. ಕಾರಂತ ಪೆರಾಜೆ ಸಂವಾದದ ಉಪಸಂಹಾರ ಮಾಡಿದರು. ಉದ್ಯಮಿ ಶಿವಶಂಕರ `Àಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಳಿಯ ಜುವೆಲ್ಸ್‍ನ ಚೇರ್‍ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಕಾರ್ಯಕ್ರಮ ಸಂಯೋಜಿಸಿದರು.

ಮುಳಿಯ ಶೋರೂಂ ಮ್ಯಾನೇಜರ್ ನಾಮದೇವ್ ಮಲ್ಯ ಸ್ವಾಗತಿಸಿ, ವೇಣುಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದ`ರ್Àದಲ್ಲಿ ಚಿನ್ನೋತ್ಸವದ ಬಂಪರ್ ಡ್ರಾವನ್ನು ಮುಖ್ಯ ಅತಿಥಿ ಡಾ| ಯು.ಪಿ. ಶಿವಾನಂದ ನೆರವೇರಿಸಿದರು. ಅನಂತರ ವಿಶೇಷ ಆಟಿಕೂಟ `Éೂೀಜನ ನಡೆಯಿತು. ಸಂವಾದದಲ್ಲಿ ಪಾಲ್ಗೊಂಡು, ಪ್ರಶ್ನೋತ್ತರದಲ್ಲಿ  ಚಿನ್ನ/ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು.