Wednesday, January 22, 2025
ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮಮ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಅಧ್ಯಕ್ಷರಾದ ದಿನೇಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ನಡೆದ 49ನೇ ಮಹಾಸಭೆ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮಮ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ 49ನೇಯ ಮಹಾಸಭೆಯು ಊರ್ವ ಸ್ಟೋರ್ ಹತ್ತಿರ ಇರುವ ಡಾಕ್ಟರ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಶ್ರೀಯುತ ಸಂಘದ ಅಧ್ಯಕ್ಷರಾದ ದಿನೇಶ್ ಕುಂಪಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ. ಕೆ, ಉಪ ಅಧ್ಯಕ್ಷರುಗಳಾದ ನಾಗಪ್ಪ ಬಿ ಅಡ್ಯಾರ್ ದಿನೇಶ್ ಬಂಗೇರ, ಹರೀಶ್ ಶೆಟ್ಟಿ ಮತ್ತು ಸಂಘಟನಾ ಕಾರ್ಯದರ್ಶಿಗಳು ಹಾಗೂ ಕಾರ್ಯಾಧ್ಯಕ್ಷರಾದ ಪ್ರಮೋದ್ ಕುಮಾರ್ ಉಳ್ಳಾಲ್ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಸದಸ್ಯರ ಸಮಸ್ಯೆಗಳು. ಮತ್ತು ಸಂಘದ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ತಂದು ಅಧ್ಯಕ್ಷರು ಸರಿಯಾದ ರೀತಿಯಲ್ಲಿ ಉತ್ತರಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

23-24 ನೇಯ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಈ ಕೆಳಗಂಡಂತೆ ಸರ್ವಾನು ಮತದಿಂದ ಆರಿಸಲಾಯಿತು. ಗೌರವ ಅಧ್ಯಕ್ಷರು ಶ್ರೀ ಶ್ರೀ ದಿನೇಶ್ ಕುಂಪಲ ಅಧ್ಯಕ್ಷರು-. ಶ್ರೀ ಆನಂದ್. ಕೆ ಉಪಾಧ್ಯಕ್ಷರುಗಳು-ಅಬೆಲ್ ಡಿಸೋಜಾ, ಹರೀಶ್ ಶೆಟ್ಟಿ, ನಾಗಪ್ಪ ಅಡ್ಯಾರ್, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಎಂ ಸಹ ಕಾರ್ಯದರ್ಶಿ ಲೋಕೇಶ್ ಕಶೆ ಕೋಡಿ ಶುಭಕರ ಶೆಟ್ಟಿ ಅಬ್ದುಲ್ ಲತಿಫ್, ಸಂಘಟನಾ ಕಾರ್ಯದರ್ಶಿ-ಉದಯಕುಮಾರ್, ಸಹ ಸಂಘಟನಾ ಕಾರ್ಯದರ್ಶಿ-ಸಂಜಯ ಕೋಟ್ಯಾನ್. ಖಜಾಂಜಿ-ಸುರೇಶ್ ಸಾಲಿಯಾನ್,
ಸಭೆಯ ಕೊನೆಯಲ್ಲಿ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಆನಂದ್ ಕೆ ಅವರು ಕಾರ್ಯಕ್ರಮ ಸಂಯೋಜಿಸಿ ವಂದನಾರ್ಪಣೆ ಗೈದರು. ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಕುಂಪಲ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.