ಜೈನ ಧರ್ಮದ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಹೊರಟಿರುವ ಜಾರ್ಖಂಡ್ ಸರಕಾರದ ಆದೇಶವನ್ನು ಹಿಂಪಡೆಯುವ0ತೆ ಜೈನ ಧರ್ಮದ ಸಂಘ ಸಂಸ್ಥೆಗಳಿ0ದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ – ಕಹಳೆ ನ್ಯೂಸ್
ಮೂಡಬಿದಿರೆ : ಜೈನ ಧರ್ಮದ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಹೊರಟಿರುವ ಜಾರ್ಖಂಡ್ ಸರಕಾರದ ಆದೇಶವನ್ನು ಹಿಂಪಡೆಯುವAತೆ ಮೂಡುಬಿದಿರೆ ಜೈನ ಮಠದ ಪರಮ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮೂಡುಬಿದಿರೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈನ ಧರ್ಮದ ಸಂಘಸAಸ್ಥೆಗಳಾದ ಜೈನ್ ಮಿಲನ್, ಮಹಾವೀರ ಸಂಘ, ಸರ್ವ ಮಂಗಳ ಜೈನ ಮಹಿಳಾ ಸಂಘ ತೌಳವ ಇಂದ್ರ ಸಮಾಜ, ತ್ರಿಭುವನ್ ಯೂತ್ ಫ್ರೆಂಡ್ಸ್ , ಬಸದಿಗಳ ಸ್ವಚ್ಛತಾ ತಂಡಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮೂಡುಬಿದ್ರೆಯ ತಹಶೀಲ್ದಾರರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ, ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ, ಸನ್ಮಾನ್ಯ ಗೃಹ ಮಂತ್ರಿಗಳಿಗೆ, ಜಾರ್ಖಂಡ್ ಸರಕಾರದ ಮುಖ್ಯಮಂತ್ರಿಗಳಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು.