ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ಲವ್ ಜಿಹಾದ್ ಘಟನೆಗಳನ್ನು ತಡೆಯಲು ವಿಶೇಷ ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಿ ! –ಕಹಳೆ ನ್ಯೂಸ್
ಮಂಗಳೂರು : ಸದ್ಯ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಲವ್ ಜಿಹಾದ್ ತಡೆಯಲು ಸಾದ್ಯವಾಗುತ್ತಿಲ್ಲ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್ಗೆ ಮತಾಂತರ ಮಾಡುವ ಘಟನೆಗಳು ಹೆಚ್ಚುತ್ತಿವೆ. ಆದರೆ ಈ ಘಟನೆಗಳು ಮತಾಂತರ ಪ್ರಕರಣವೆಂದು ದಾಖಲಾಗುವುದಿಲ್ಲ. ಈ ಗಂಭೀರ ಸಮಸ್ಯೆಗೆ ಪರಿಹಾರವಾಗಿ ರಾಜ್ಯದಲ್ಲಿ ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಠಿಣವಾಗಿ ಅನುಷ್ಠಾನ ಮಾಡಲು ವಿಶೇಷ ಲವ್ ಜಿಹಾದ್ ವಿರೋಧಿ ಪೊಲೀಸ್ ದಳ ವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಸಂಘಟನೆಗಳ ಮೂಲಕ ರಾಷ್ಟ್ರೀಯ ಹಿಂದೂ ಆಂದೋಲನ ವನ್ನು ಮಂಗಳೂರು ನಗರದ ಕ್ಲಾಕ್ ಟವರ್, ಮಿನಿ ವಿಧಾನಸೌಧದ ಎದುರು ನಡೆಸಲಾಯಿತು.
ಅಯ್ಯಪ್ಪ ಮಂಡಳಿ ಜಿಲ್ಲಾ ಉಪಾಧ್ಯಕ್ಷೆ ಆಗಿರುವ ಸೌ. ಕತ್ಯಾಯನಿ ಇವರು ಮಾತನಾಡುತ್ತ ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ಭಯೋತ್ಪಾದಕ ಚಟುವಟಿಕೆಗಳಿಗೆ ಉಪಯೋಗಿಸುವುದರ ಬಗ್ಗೆ ಅನೇಕ ಘಟನೆಗಳಾಗಿವೆ. ಇದೆಲ್ಲವನ್ನೂ ಗಮನಿಸಿದರೆ ಹಿಂದೂ ಸ್ತ್ರೀಯರಿಗೆ ನಾವು ನಮ್ಮ ದೇಶದ ರಾಷ್ಟ್ರ ಪುರುಷರ ಪರಾಕ್ರಮಗಳ ಕುರಿತು ಹೇಳದೆ ಇರುವುದು, ಹಾಗೂ ಅವರಲ್ಲಿ ಇರುವ ಶಕ್ತಿ ಬಗ್ಗೆ ಹಿಂದೂ ಸ್ತ್ರೀ ವಿಚಾರ ಮಾಡಬೇಕಿದೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ನಿತ್ಯ ವರದಿ ಆಗುತ್ತಿದ್ದರು ಸರಕಾರ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಮತ್ತು ರಣ ರಾಗಿಣಿ ಶಾಖೆಯ ಸಮನ್ವಯಕಿ ಸೌ. ಪವಿತ್ರಾ ಕುಡ್ವ ಇವರು ಮಾತನಾಡಿ, ದೆಹಲಿಯ ಜಿಹಾದಿ ಅಫ್ತಾಬ್ ಹಿಂದೂ ಯುವತಿ ಶ್ರದ್ಧಾವಾಲ್ಕರ್ಳನ್ನು ಲವ್ ಜಿಹಾದ್ ಪ್ರಕರಣದಲ್ಲಿ ೩೫ ತುಂಡುಗಳಾಗಿ ಕತ್ತರಿಸಿದ ಘಟನೆಯ ನಂತರ ದೇಶಾದ್ಯಂತ ಲವ್ ಜಿಹಾದ್ ವಿರುದ್ಧ ತೀವ್ರ ಆಕ್ರೋಶದ ಅಲೆ ಹಬ್ಬಿದೆ. ಕರ್ನಾಟಕದಲ್ಲೂ ಸಹ ಲವ್ ಜಿಹಾದ್ ಘಟನೆಗಳು ಹೆಚ್ಚಾಗಿದೆ. ಮಾರ್ಚ್ ೨೦೨೨ ರಂದು ಗದಗದಲ್ಲಿ ಅಪೂರ್ವ ಯುವತಿಯನ್ನು ಮಹಮ್ಮದ್ ಇಜಾಜ್ನು ಇಸ್ಲಾಮ್ಗೆ ಮತಾಂತರ ಮಾಡಿ, ಆಕೆಯ ಮೇಲೆ ೨೫ ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲು ಪ್ರಯತ್ನಿಸಿದ್ದನು. ಈ ಎಲ್ಲ ಗಂಭೀರ ಘಟನೆಗಳನ್ನು ಗಮನಕ್ಕೆ ತಗೆದುಕೊಂಡು ಸರಕಾರವು ರಾಜ್ಯದಿಂದ ಮಹಿಳೆಯರು ಮತ್ತು ಹುಡುಗಿಯರ ನಾಪತ್ತೆಯ ಹಿಂದೆ ಏನಾದರೂ ಪಿತೂರಿ ಇದೆಯೇ ಅಥವಾ ಅದರ ಹಿಂದೆ ಯಾವುದಾದರೂ ಲವ್ ಜಿಹಾದ್’ ಇದೆಯೇ ಎಂದು ತನಿಖೆ ಮಾಡಲು ಗೃಹ ಕಚೇರಿ ಸ್ವತಂತ್ರ ತಂಡವನ್ನು ನೇಮಿಸಬೇಕು, ಲವ್ ಜಿಹಾದ್’ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ ಅಪರಾಧಗಳನ್ನು ದಾಖಲಿಸಬೇಕು. ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು. ಭಾರತದಲ್ಲಿ ಎಲ್ಲ ವ್ಯವಹಾರಗಳನ್ನು ‘ಸೆಕ್ಯುಲರ್ ‘ ಸವಿಂಧಾನದ ಆಧಾರದಲ್ಲಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತದೆ. ಇದರ ಆಧಾರದಲ್ಲಿಯೇ ಇಸ್ಲಾಮಿ ಶರೀಯತ್ ನಿಯಮಗಳಿಗನುಸಾರ ನಡೆಸಲಾಗುವ ‘ಇಸ್ಲಾಮಿಕ್ ಬ್ಯಾಂಕುಗಳನ್ನು ಭಾರತದಲ್ಲಿ ಆರಂಭಿಸಲು ನಿರಾಕರಿಸಲಾಯಿತು, ಆದರೆ ಅದೇ ಉದ್ದೇಶವನ್ನು ಇಂದು ´ಹಲಾಲ್ ಆರ್ಥಿಕ ವ್ಯವಸ್ಥೆ
ಯ ಮೂಲಕ ಸಾಧ್ಯಗೊಳಿಸಲಾಗುತ್ತಿದೆ. ಪ್ರಸ್ತುತ ಇಸ್ಲಾಮಿ ಸಂಸ್ಥೆಗಳು ಪ್ರತಿಯೊಂದು ಪದಾರ್ಥ ಮತ್ತು ವಸ್ತುವನ್ನು ಇಸ್ಲಾಮಿಗಳುಸಾರ ಕಾನೂನು ಬದ್ಧ ಅಂದರೆ `ಹಲಾಲ್´ ಆಗಿರುವುದರ ಬೇಡಿಕೆಯನ್ನು ಮಾಡುತ್ತಿವೆ ಈ ಬೇಡಿಕೆಯು ಕೇವಲ ಮಾಂಸಕಷ್ಟೆ ಸೀಮಿತವಾಗಿರದೆ ´ಧಾನ್ಯ, ಹಣ್ಣು, ಸೌಂದರ್ಯವರ್ಧಕಗಳು, ಔಷದ ಇತ್ಯಾದಿ ಉತ್ಪನ್ನಗಳು ಹಲಾಲ್ ದೃಢೀಕೃತವಾಗಿರಬೇಕು ಎಂದು ಬೇಡಿಕೆಯನ್ನು ಮಾಡಲಾಗುತ್ತಿದೆ. ಆದುದರಿಂದ ಇಸ್ಲಾಮಿನ ಮೇಲಾಧಾರಿತ ‘ಹಲಾಲ್ ವ್ಯವಸ್ಥೆಯನ್ನು’ ಇಸ್ಲಾಮೇತರ ಸಮಾಜದವರ ಮೇಲೆ ಹೇರುವುದು ಅವರ ಸಾವಿಂಧಾನಿಕ ಧಾರ್ಮಿಕ ಹಕ್ಕುಗಳ ವಿರುದ್ಧವಾಗಿದೆ. ಆದ್ದರಿಂದ ಧಾರ್ಮಿಕ ಭೇದ ಭಾವ ಮಾಡುವ ಹಲಾಲ್ ಪ್ರಮಾಣ ಪತ್ರ ಕೊಡುವುದಕ್ಕೆ ಭಾರತದಲ್ಲಿ ನಿಷೇಧ ಹೇರಬೇಕು ಎಂದು ಹೇಳಿದರು. ಮತ್ತು ಈ ವಿಷಯದಲ್ಲಿ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಧರ್ಮಪ್ರೇಮಿಗಳದ ಸೌ. ಕಾತ್ಯಯಿನಿ ಅಯ್ಯಪ್ಪ ಮಂಡಳಿ ಜಿಲ್ಲಾ ಉಪಾಧ್ಯಕ್ಷೆ, ರೈತ ಸಂಘ ರಾಜ್ಯ ಉಪಾಧ್ಯಕ್ಷ ಶ್ರೀ. ಗಿರೀಶ್ ಕೊಠ್ಠಾರಿ, ಉದ್ಯಮಿಗಳಾದ ಶ್ರೀ M.J. ಶೆಟ್ಟಿ, ವಿನಾಯಕ ಕಾಮತ್, ಸತೀಶ್,
ಸ್ವಾಭಿಮಾನಿ ಹಿಂದೂ ಬಳಗ ದಿಂದ ಧರ್ಮೇಂದ್ರ, ಗಣೇಶ್, ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಪ್ರಭಾಕರ್ ನಾಯ್ಕ, ಶ್ರೀ ಉಪೇಂದ್ರ ಆಚಾರ್ಯ, ಶ್ರೀ ಕಿಶೋರ್, ಉಪಸ್ಥಿತರಿದ್ದರು. ಈ ಆಂದೋಲನಕ್ಕೆ ೪೮ ಜನರು ಉಪಸ್ಥಿತರಿದ್ದರು