Wednesday, January 22, 2025
ಸುದ್ದಿ

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸುಂದರ ಆಚಾರ್ಯ ಬೆಳುವಾಯಿ ಆಯ್ಕೆ – ಕಹಳೆ ನ್ಯೂಸ್

ಮಂಗಳೂರು: ವಿಶ್ವಬ್ರಾಹ್ಮಣ ದೇವಸ್ಥಾನದ ಪವಿತ್ರ ಕ್ಷೇತ್ರ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿಯ 2022 ರಿಂದ ಮುಂದಿನ 5 ವರ್ಷದ ಅವಧಿಗೆ ಸುಂದರ ಆಚಾರ್ಯ ಬೆಳುವಾಯಿ ಆಡಳಿತ ಮೊಕ್ತೇಸರರಾಗಿ ಕ್ಷೇತ್ರದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡನೇ ಮೊಕ್ತೇಸರರಾಗಿ ಎ. ಲೋಕೇಶ್ ಆಚಾರ್ಯ ಚಿಲಿಂಬಿ, ಮೂರನೇ ಮೊಕ್ತೇಸರರಾಗಿ ದಾಮೋದರ ಆಚಾರ್ಯ ಕಲ್ಪನೆ ಆಯ್ಕೆಗೊಂಡಿದ್ದು, ಆಡಳಿತ ಮಂಡಳಿಯ ಸದಸ್ಯರಾಗಿ ರಾಜೇಂದ್ರ ಪೇಜಾವರ, ಪಿ. ರವೀಂದ್ರ ಮಂಗಳಾದೇವಿ, ಟಿ. ಜಯಕರ ಆಚಾರ್ಯ ತಲೆಬೈಲ್, ಕೆ. ಕೆ. ವಿಠ್ಠಲ್, ಮರೋಳಿ ಸುಂದರ ಆಚಾರ್ಯ, ಎಂ ಶೇಕರ ಆಚಾರ್ಯ, ಕಡೇಶ್ವಾಲ್ಯ ಯೋಗೀಶ್ ಆಚಾರ್ಯ, ಕೆ. ಎಲ್. ಸುರೇಶ್, ಕಿನ್ನಿಗೋಳಿ ದಿನೇಶ್, ಹರೀಶ್ ಹರೇಕಳ, ಟಿ. ದಿವಾಕರ, ಬಿ. ಕೆ. ಸತೀಶ್, ಪುರುμÉೂೀತ್ತಮ ಪುತ್ತೂರು, ಜನಾರ್ದನ ಕುಂಟಿಕಾನ ಆಯ್ಕೆಗೊಂಡಿದ್ದಾರೆ.