Wednesday, January 22, 2025
ಕ್ರೈಮ್ಮೈಸೂರುರಾಜ್ಯಸುದ್ದಿ

ಬೆತ್ತಲೆ ಫೋಟೋ ಕಳ್ಸಿ ಯುವಕರನ್ನು ಬುಟ್ಟಿಗೆ ಬೀಳಿಸಿ, ಹಣ ಪೀಕುತ್ತಿದ್ದ ಖತರ್ನಾಕ್ ಲೇಡಿ ಬಂಧನ ; ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ಈ ಆಂಟಿ..! – ಕಹಳೆ ನ್ಯೂಸ್

ಮೈಸೂರು: ಬೆತ್ತಲೆ ಫೋಟೋಗಳನ್ನು ಕಳುಹಿಸಿ ಯುವಕರು, ಪುರುಷರನ್ನು ಬುಟ್ಟಿಗೆ ಬೀಳಿಸಿ, ಬಳಿಕ ಅವರಿಂದ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಮಹಿಳೆಯನ್ನು (Woman) ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಿರಿಯಾಪಟ್ಟಣ ತಾಲೂಕಿನ ಸವಿತ ಅಲಿಯಾಸ್ ಮಂಜುಳ ಯಾದವ್ ಅಮಾಯಕರಿಂದ ಲಕ್ಷ ಲಕ್ಷ ಹಣ ಪಡೆದು ಎಸ್ಕೇಪ್ ಆಗುತ್ತಿದ್ದಳು. ಆಕೆ ಮೈಸೂರಿನಲ್ಲಿ (Mysuru) ಸೆಟಲ್ ಆಗಿ ಮಾಡುತ್ತಿದ್ದುದು ಮಾತ್ರ ಖತರ್ನಾಕ್ ಕೆಲಸಗಳನ್ನು. ಪುರುಷರಿಗೆ ತನ್ನ ಅರೆನಗ್ನ ಫೋಟೋಗಳನ್ನು ಕಳುಹಿಸಿ ಅವರನ್ನು ಬಲೆಗೆ ಬೀಳಿಸುತ್ತಿದ್ದಳು. 

ವರದಿಗಳ ಪ್ರಕಾರ ಸವಿತ ಮೈಸೂರಿನಲ್ಲಿ ತನ್ನ ಪರಿಚಯಸ್ಥ ದಂಪತಿಗೆ ಯಾಮಾರಿಸಿ ಲಕ್ಷಗಟ್ಟಲೆ ಹಣವನ್ನು ಪೀಕಿದ್ದಳು. ದಂಪತಿ ಆಕೆಯ ಬಳಿ ಹಣ ಕೇಳಲು ಬಂದಾಗ ಹಲ್ಲೆ ಮಾಡಿದ್ದಾಳೆ ಎಂದು ದಂಪತಿ ಆರೋಪಿಸಿದ್ದಾರೆ. ಮಾತ್ರವಲ್ಲದೇ ಸಾಲ ಕೇಳಲು ಹೋದವರಿಗೆ ಬೆತ್ತಲೆ ಫೋಟೋ ಕಳುಹಿಸಿ ಬ್ಲಾಕ್‌ಮೇಲ್ (Blackmail) ಮಾಡುತ್ತಿದ್ದಳು. 

ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿ ಸವಿತ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಈ ವೇಳೆ ಸವಿತ ಸಿಕ್ಕಿಬಿದ್ದಿದ್ದು, ಆಕೆಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.