Friday, November 22, 2024
ಸುದ್ದಿ

ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್! – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದ ಎಲ್ಲಾ ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್. ಆನ್ ಲೈನ್ ನಲ್ಲಿ ಮಾರ್ಕ್ಸ್  ಕಾರ್ಡ್ ಸಿಗುವಂತೆ ಮಾಡಿದ್ದ ಪಿಯು ಮಂಡಳಿ, ಅನ್ ಸೇಫ್ ಟೆಕ್ನಾಲಜಿ ಮೊರೆ ಹೋಗಿದೆ. ಇದರಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಟ ಆತಂಕಕ್ಕೆ ಸಿಲುಕಿದೆ.

ಇತ್ತೀಚೆಗಷ್ಟೆ ರಾಜ್ಯ ಪಿಯು ಮಂಡಳಿ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಆನ್ ಲೈನ್ ನಲ್ಲಿ ಸಿಗುವಂತೆ ಮಾಡಿದೆ. ಡಿಜಿ ಲಾಕರ್ ಎಂಬ ನೂತನ ಟೆಕ್ನಾಲಜಿ ಬಳಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಇಲ್ಲಿ ಯಾವ ಮಾರ್ಕ್ಸ್ ಕಾರ್ಡ್ ಕೂಡ ಸೇಫ್ ಆಗಿಲ್ಲ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಜಿ ಲಾಕರ್ ಕೇಂದ್ರೀಕೃತ ಸರ್ವರ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಹ್ಯಾಕರ್ ಬೇಕಾದರು ಸರಳವಾಗಿ ಇದನ್ನು ಕ್ರಾಕ್ ಮಾಡಬಹುದು. ನ್ಯಾಶನಲ್ ಅಕಾಡಿಮೆಕ್ ಡೆಪಾಸಿಟರಿ (ನ್ಯಾಡ್) ಎಂಬ ಸಂಟ್ರಲೈಸಡ್ ಸರ್ವರ್ ಈ ಹಿಂದೆ ಹ್ಯಾಕ್ ಮಾಡಲಾಗಿತ್ತು. ಅದೇ ರೀತಿಯ ತಂತ್ರಜ್ಞಾನವನ್ನು ಡಿಜಿಲಾಕರ್ ಬಳಸುತ್ತಿದೆ. ಹಾಗಾಗಿ ಡಿಜಿಲಾಕರ್ ನಲ್ಲಿ ಅಂಕಪಟ್ಟಿ ಸೇವ್ ಮಾಡಿ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವ ಪಿಯು ಮಂಡಳಿ ವಿದ್ಯಾರ್ಥಿಗಳ ಭವಿಷ್ಯವನ್ನು ಆತಂತಕ್ಕೆ ಸಿಲುಕಿಸಿದೆ.

ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ಅವರು ಕಳೆದ ತಿಂಗಳಷ್ಟೆ ಈ ತಂತ್ರಜ್ಞಾನದ ಬಳಕೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇವರು ಆತುರದಲ್ಲಿ ನಿರ್ಣಯ ಕೈಗೊಂಡಂತಿದೆ. ಈ ರೀತಿ ಕೇಂದ್ರೀಕೃತ ಸರ್ವರ್ ಬಳಸುದರಿಂದ ದಾಖಲೆಗಳನ್ನು ತಿರುಚುವ ಸಾಧ್ಯತೆ ಇದೆ. ಜೊತೆಗೆ ತಿದ್ದುಪಡಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಟಿ ಪರಿಣಿತ ಮಧಸೂಧನ್ ಹೇಳಿದ್ದಾರೆ.

ಸೆಂಟ್ರಲೈಸಡ್ ಸರ್ವರ್ ಬಳಸದೆ ಆನ್ ಲೈನ್ ನಲ್ಲಿ ಡಾಕ್ಯೂಮೆಂಟ್ ಸೇವ್ ಮಾಡುವುದಕ್ಕೆ ಬೇರ ಅವಕಾಶವಿದ್ದು, ಸದ್ಯಕ್ಕೆ ಹ್ಯಾಕರ್ ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮುಕ್ತಿ ಪಡೆಯಲು ಬ್ಲಾಕ್ ಚೈನ್ ಟೆಕ್ನಾಲಜಿ ಬಳಸಬೇಕಾಗುತ್ತದೆ.

ಏನಿದು ಬ್ಲಾಕ್ ಚೈನ್ ಟೆಕ್ನಾಲಜಿ?
ಇಲ್ಲಿ ದಾಖಲೆಗಳು ಲಿಂಕ್ ಮೂಲಕ ಸೇವ್ ಮಾಡಲಾಗುತ್ತದೆ. ಲಕ್ಷಗಟ್ಟಲೆ ಕಂಪ್ಯೂಟರ್ ಬಳಕೆದಾರರು ಈ ಡೇಟಾ ಅನ್ನು ನಿರ್ವಹಿಸುತ್ತಾರೆ. ಇಲ್ಲಿ ಯಾವುದೇ ಮಾರ್ಕ್ಸ್ ಕಾರ್ಡ್ ನ ಡೇಟಾ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಯಾವುದೇ ಮೂರನೇ ವ್ಯಕ್ತಿ ಸರ್ವರ್ ಬಳಕೆ ಮಾಡುವುದಿಲ್ಲ. ಓಪನ್ ಸೋರ್ಸ್ ಡೇಟಾ ಮೈಂಟೈನೆನ್ಸ್ ತಂತ್ರಜ್ಞಾನದ ಮೂಲಕ ಮಾಹಿತಿಯನ್ನು ಕ್ರೋಢಿಕರಿಸಲಾಗುತ್ತದೆ.

ಹ್ಯಾಕರ್ಸ್ ನಿಂದ ನಿಮ್ಮ ದಾಖಲೆಗಳನ್ನು ರಕ್ಷಿಸಿಕೊಳ್ಳಬೇಕಿದಾರೆ ಬ್ಲಾಕ್ ಚೈನ್ ತಂತ್ರಜ್ಞಾನದ ಬಳಸಬಹುದಾಗಿದೆ. ಇದರಲ್ಲಿ ಯಾರೂ ಕೂಡ ಹ್ಯಾಕ್ ಮಾಡಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ಮಾಹಿತಿ ನಿರ್ವಹಣೆ ಮಾಡಲು ಲಕ್ಷಾಂತರ ಕಂಪ್ಯೂಟರ್ ಪರಿಣಿತರು ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಮೂರನೇ ವ್ಯಕ್ತಿಯ ಸರ್ವರ್ ಸೇವೆಗೆ ಇಲ್ಲಿ ಅವಕಾಶವಿರುವುದಿಲ್ಲ. ಹಾಗಾಗಿ ಇದು ಅತಿ ಸುರಕ್ಷಿತ ತಂತ್ರಜ್ಞಾನ ಎಂದು ಐಟಿ ಪರಿಣಿತ ರಜತ್ ತಿಳಿಸಿದ್ದಾರೆ.

ಡಿಜಿಲಾಕರ್ ಹಾಗೂ ನ್ಯಾಡ್ ಬಳಸಿದ್ರೆ ಎದುರಾಗೋ ತೊಂದರೆಗಳೇನು?

* ಇವುಗಳಲ್ಲಿ ಸೆಂಟ್ರಲೈಸ್ಡ್ ಸರ್ವರ್ ಮೂಲಕ ಎಲ್ಲಾ ಮಾಹಿತಿ ಕ್ರೋಢೀಕರಿಸಲಾಗುತ್ತದೆ.
* ಥರ್ಡ್ ಪಾರ್ಟಿ ಸರ್ವರ್ ಬಳಕೆ ಮಾಡುವುದರಿಂದ ಬಳಕೆದಾರರಿಗೆ ಆತಂಕವಿರುತ್ತದೆ.
* ಹ್ಯಾಕರ್ಸ್ ಸಹಾಯದಿಂದ ಸರ್ವರ್ ಹ್ಯಾಕ್ ಮಾಡಬಹುದು.
* ಮೇಲಿನ ಸಂಸ್ಥೆಗಳಲ್ಲಿನ ಸಿಬ್ಬಂದಿಗಳ ಸಹಾಯದಿಂದ ಡೇಟಾ ಬದಲಾಯಿಸಬಹುದು.
* ಮಾರ್ಕ್ಸ್ ಕಾರ್ಡ್ ಗಳನ್ನು ದುರುಪಯೋಗ ಪಡೆಸಿಕೊಳ್ಳಬಹುದು.

ಪಿಯು ನಿರ್ದೇಶಕರು ಎಷ್ಟೇ ಒಳ್ಳೆಯ ಉದ್ದೇಶದಿಂದ ಡಿಜಿಲಾಕರ್ ನಂತ ಸೇವೆ ವಿದ್ಯಾರ್ಥಿಗಳಿಗೆ ನೀಡಿದರು ಹ್ಯಾಕರ್ಸ್ ಗಳ ಹಾವಳಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ.