Wednesday, January 22, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ–ಕಹಳೆ ನ್ಯೂಸ್

ಪುತ್ತೂರು ; ನಮ್ಮ ಇತಿಹಾಸದಿಂದ ಕಲಿಯಲು ಬಹಳಷ್ಟು ವಿಚಾರಗಳಿವೆ. ಆದರೆ ಪ್ರಸ್ತುತಕಾಲಘಟ್ಟದಲ್ಲಿ ಯಾರು ಇತಿಹಾಸವನ್ನು ಮರೆಯುತ್ತಾರೋ ಅವರು ಎಂದಿಗೂ ಇತಿಹಾಸ ಸೃಷ್ಟಿಸಲಾರರು. ಆದ್ದರಿಂದ ನೈಜ ಇತಿಹಾಸದ ಅಧ್ಯಯನ ಅನಿವಾರ್ಯವಾದುದು. ಜೊತೆಗೆ ನಮ್ಮ ಸಂಸ್ಕಾರ, ಸಂಸ್ಕøತಿ, ಹಾಗೂ ಸನಾತನಧರ್ಮದ ಬಗ್ಗೆ ತಿಳಿದುಕೊಳ್ಳಬೇಕು. ಇದರೊಂದಿಗೆ ತಪ್ಪಾದ ಇತಿಹಾಸವನ್ನು ತಿದ್ದಿ ನೈಜ ಇತಿಹಾಸದ ಕಡೆಗೆ ಗಮನ ಕೊಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹವಿದ್ಯಾಲಯದಲ್ಲಿ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ವಿವೇಕಾನಂದ ಸಂಶೋಧನ ಕೇಂದ್ರ ಮತ್ತು ಇತಿಹಾಸ ವಿಭಾಗದ ಆಶ್ರಯದಲ್ಲಿ ನಡೆದ ದಕ್ಷಿಣಕನ್ನಡ ಮತ್ತುಕೊಡಗು-ಆಧುನಿಕ ಯುಗದ ಅನುಭವ ವಿಶ್ಲೇಷಣೆ ಎನ್ನುವ ರಾಷ್ಟೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ ್ಷಡಾ ಪ್ರಭಾಕರ ಭಟ್‍ಕಲ್ಲಡ್ಕ ಭಟ್ ಮಾತನಾಡಿ, ಸಂಸ್ಕøತಿಯನ್ನು ಅರಿಯುವುದು ಮತ್ತು ಗುರುತಿಸುವುದು ತುಂಬಾ ಅಗತ್ಯವಾಗಿದೆ. ನಮ್ಮ ಸಂಸ್ಕಾರ ಮತ್ತು ಸಂಸ್ಕøತಿಯ ಬಗ್ಗೆ ಜಾಗೃತಗೊಳ್ಳಬೇಕಾಗಿದೆ. ಹೆಣ್ಣು ಮಕ್ಕಳು ದೇಶಕ್ಕಾಗಿ ಹೋರಾಟ ಮಾಡಿದ ಹಾಗೂ ತಾಯಿಯನ್ನುದೇವರೆಂದು ಪೂಜೆ ಮಾಡಿದ ಏಕೈಕ ದೇಶ ಭಾರತ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಲೋಕೇಶ್ ಕೆ ಎಂ, ಮಾತನಾಡಿ, ಎಲ್ಲಾ ರಾಷ್ಟ್ರಗಳಿಗೂ ಅದರದೇ ಆದ ಇತಿಹಾಸವಿರುತ್ತದೆ. ಅದರಲ್ಲೂ ಸ್ಥಳೀಯ ಇತಿಹಾಸಗಳಿಗೆ ಹೆಚ್ಚು ಒತ್ತನ್ನು ನೀಡಬೇಕು. ನಮ್ಮ ಮುಂದಿರುವ ದಾಖಲೆಗಳ ಜೊತೆಗೆ ಸಂವಾದವನ್ನು ಮಾಡುವುದರ ಮೂಲಕ ಇತಿಹಾಸದ ಬಗ್ಗೆ ತಿಳಿದುಕೊಳ್ಳುತ್ತಾ ಹೋಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಕೊಡವ ಸಾಂಸ್ಕøತಿಕ ಅಧ್ಯಯನ ಪೀಠದ ಸಂಯೋಜಕಿ ಡಾ.ಮೀನಾಕ್ಷಿ ಎಂ ಎಂ, ಕಾಲೇಜಿನಇತಿಹಾಸ ವಿಭಾಗದ ಮುಖ್ಯಸ್ಥ ಡಾ ಶ್ರೀಧರ್ ನಾಯಕ್ ಬಿ , ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ ಶಿವಪ್ರಸಾದ್ ಕೆ ಎನ್,ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಜಿ ಶ್ರೀಧರ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಸುಲಕ್ಷಣ,ಸಾಯಿಕೃಪ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣುಗಣಪತಿ ಭಟ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್‍ನಿಡ್ಪಳ್ಳಿ ವಂದಿಸಿ, ಕನ್ನಡ ವಿಭಾಗದಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ ಕಾರ್ಯಕ್ರಮವನ್ನು ನಿರೂಪಿಸಿದರು.