Wednesday, January 22, 2025
ಸುದ್ದಿ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ‘ಕಾಂತಾರ’ ಹವಾ : ಬಹು ಆಯ್ಕೆ ವಿಭಾಗದಲ್ಲಿ ಕಾಂತಾರ ಸಿನಿಮಾ ಕುರಿತ ಪ್ರಶ್ನೆ -ಕಹಳೆ ನ್ಯೂಸ್

ಸ್ಯಾಂಡಲ್​ವುಡ್​​​ನ ಕಾಂತಾರ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಕಾಂತಾರ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಇದೀಗ ರಿಷಭ್​ ಶೆಟ್ಟಿ ಕಾಂತಾರ 2 ಸಿನಿಮಾದ ತಯಾರಿಯಲ್ಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ದಂಪತಿ ಸಮೇತರಾಗಿ ಪಂಜುರ್ಲಿ ದೈವದ ಅನುಮತಿಯನ್ನು ಪಡೆದಿರುವ ರಿಷಭ್​ ಶೆಟ್ಟಿ ಸ್ಯಾಂಡಲ್​ವುಡ್​ಗೆ ಮತ್ತೊಂದು ಬ್ಲಾಕ್​ ಬಸ್ಟರ್​​​ ಸಿನಿಮಾವನ್ನು ನೀಡುವ ತಯಾರಿಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂತಾರ ಸಿನಿಮಾದ ಹಾಡುಗಳು, ದೃಶ್ಯಗಳು, ಡೈಲಾಗ್​ ಹೀಗೆ ಪ್ರತಿಯೊಂದು ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದುಕೊಂಡಿದೆ. ಈ ಎಲ್ಲದರ ನಡುವೆ ಇದೀಗ ಕಾಂತಾರ ಸಿನಿಮಾ ಇದೀಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದೆ. ಹೌದು..! ಪರೀಕ್ಷೆಯೊಂದರಲ್ಲಿ ಒಂದು ಅಂಕಕ್ಕೆ ಕಾಂತಾರ ಸಿನಿಮಾಗೆ ಸಂಬಂಧಪಟ್ಟ ಪ್ರಶ್ನೆಯನ್ನು ಕೇಳಲಾಗಿದೆ .

ಕೆಎಂಎಫ್​​ ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ.. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಪ್ರಶ್ನೆ ಪತ್ರಿಕೆಯ ಫೋಟೋದಲ್ಲಿ ಬಹು ಆಯ್ಕೆ ಪ್ರಶ್ನೆಯಲ್ಲಿ ಕಾಂತಾರ ಕುರಿತು ಪ್ರಶ್ನೆಯನ್ನು ಕೇಳಲಾಗಿದೆ. ಕಾಂತಾರ ಸಿನಿಮಾ ಯಾವುದನ್ನು ಆಧರಿಸಿ ಹೆಣೆಯಲಾದ ಸಿನಿಮಾ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ನಾಲ್ಕು ಆಯ್ಕೆಯನ್ನು ನೀಡಲಾಗಿದ್ದು ನಾಲ್ಕು ಆಯ್ಕೆಯಲ್ಲಿ ಜಲ್ಲಿಕಟ್ಟು, ಭೂತಕೋಲ, ಯಕ್ಷಗಾನ ಹಾಗೂ ದಮ್ಮಾಮಿ ಎಂದು ಆಯ್ಕೆಯನ್ನು ನೀಡಲಾಗಿದೆ. ಈ ಫೋಟೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.