Thursday, January 23, 2025
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಓಪ್ಟಮ್ ಕಂಪನಿಯ ಕ್ಯಾಂಪಸ್ ನೇಮಕಾತಿ ತರಬೇತಿ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಹಾಗೂ ನೇಮಕಾತಿ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಯುನೈಟೆಡ್ ಸ್ಟೇಟ್ಸ್ ಮೂಲದ ಬಹುರಾಷ್ಟ್ರೀಯ ಹೆಲ್ತ್ ಕೇರ್ ಮತ್ತು ಇನ್ಶೂರೆನ್ಸ್ ಕಂಪನಿ ಓಪ್ಟಮ್‍ನ ಮೆಡಿಕಲ್ ಕೋಡರ್ ಹುದ್ದೆಗಳಿಗಾಗಿ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಓಪ್ಟಮ್ ಕಂಪನಿಯು 1,25,000 ಉದ್ಯೋಗಿಗಳಿರುವ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಪ್ರಸ್ತುತ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಆವಶ್ಯಕತೆಯಿದ್ದು ಬದ್ಧತೆ ಹಾಗೂ ಉತ್ಸಾಹಹೊಂದಿರುವ ಪದವೀಧರರನ್ನು ನೇಮಕ ಮಾಡುವ ಗುರಿಯನ್ನು ಹೊಂದಿದೆ.

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಕಂಪನಿಗೆ ಆಯ್ಕೆಯಾದ 42 ಅಭ್ಯರ್ಥಿಗಳಿಗೆ 5 ವಾರಗಳ ಕಡ್ಡಾಯ ತರಬೇತಿ ಕಾರ್ಯಕ್ರಮವನ್ನು ಕಂಪನಿಯ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ. ಸದರಿ ತರಬೇತಿಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಈ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಎಎಪಿಸಿಯ ಸಿಪಿಸಿ ಪ್ರಮಾಣೀಕರಣ ಪರೀಕ್ಷೆಯನ್ನು ಎದುರಿಸಲು ಅರ್ಹರಾಗಿರುತ್ತಾರೆ. ಸಿಪಿಸಿ ಪ್ರಮಾಣೀಕರಣ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಅಂತಿಮ ಸುತ್ತಿನ ಸಂದರ್ಶನವಿದ್ದು ಈ ಸಂದರ್ಶನದಲ್ಲಿ ಕಂಪನಿಯ ನೇಮಕಾತಿ ಪತ್ರವನ್ನು ನೀಡಲಾಗುವುದು.

ಈ ತರಬೇತಿ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೆರೋ ರವರ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ಲೇಸ್‍ಮೆಂಟ್ ಅಧಿಕಾರಿ ಡಾ| ರಾಧಾಕೃಷ್ಣ ಗೌಡರವರು ಆಯೋಜಿಸಿರುತ್ತಾರೆ.