Thursday, January 23, 2025
ಸುದ್ದಿ

ಮಂಗಳೂರು: ಸ್ಮಾರ್ಟ್ ಸಿಟಿಯ ಗುಂಡಿಗೆ ಬಿದ್ದ ಮಹಿಳೆ: ಸಾರ್ವಜನಿಕರಿಂದ ರಕ್ಷಣೆ – ಕಹಳೆ ನ್ಯೂಸ್

ಮಂಗಳೂರು ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಮುಂಭಾಗದ ರಸ್ತೆ ಪಕ್ಕ ಕೇಬಲ್ ಕಾಮಗಾರಿಗಾಗಿ ಅಗೆದಿದ್ದ ಗುಂಡಿಗೆ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಸ್ಥಳೀಯರು ಮಹಿಳೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಕೇಬಲ್ ದುರಸ್ತಿ ನೆಪದಲ್ಲಿ ಸಾಕಷ್ಟು ಇಂತಹ ಗುಂಡಿಗಳನ್ನು ಅಗೆಯಲಾಗಿದೆ. ಕಾಮಗಾರಿ ಮಾಡುವವರು ಯಾರೂ ಕೂಡಾ ಸೂಚನಾ ಫಲ ಹಾಕದೇ ಇರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂಬುದು ಸ್ಥಳೀಯರ ಆರೋಪ.

ಇಂತಹ ಘಟನೆಗಳು ಪ್ರತಿದಿನವೂ ನಡೆಯುತ್ತಲೇ ಇವೆ. ಕಾಮಗಾರಿಗಾಗಿ ಎಲ್ಲ ಕಡೆಗಳಲ್ಲಿ ರಸ್ತೆ ಪಕ್ಕದಲ್ಲಿ ಅಗೆಯಲಾಗಿದೆ. ಆದರೆ ಯಾರೂ ಕೂಡ ವಾಹನ ಸವಾರರ ಹಾಗೂ ಪಾದಚಾರಿಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.