Sunday, January 19, 2025
ಕಾಸರಗೋಡುಸುದ್ದಿ

ಟೀಚರ್‌ ಬಳಿ ಕೇಳಿದ್ದು 500ರೂ. ಕೈಸೇರಿದ್ದು 51 ಲಕ್ಷ ರೂ.! ; 48 ಗಂಟೆಗಳಲ್ಲಿ ನಡೆಯಿತು ಮ್ಯಾಜಿಕ್ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಿರುವನಂತಪುರಂ, ಡಿ 20: ಕೇರಳದ ಪಾಲಕ್ಕಾಡ್‌ನ‌ ಕೂಟ್ಟನಾಡ್‌ ಎಂಬಲ್ಲಿ ಮಹಿಳೆಯೊಬ್ಬರು ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲೂ ನನ್ನ ಬಳಿ ಹಣವಿಲ್ಲದಾಗ 500 ರೂ. ಕೊಡಬಹುದೇ ಎಂದು ಮಗನ ಟೀಚರ್‌ ಬಳಿ ಕೇಳಿಕೊಂಡಿದ್ದು, ಇದೀಗ ಅವರ ಖಾತೆಗೆ 48 ಗಂಟೆಗಳಲ್ಲಿ ಬರೋಬ್ಬರಿ 51 ಲಕ್ಷ ರೂ.ಗಳು ಬಂದು ಬಿದ್ದಿದೆ!

ಸುಭದ್ರಾ(46) ಎಂಬವರಿಗೆ ಮೂವರು ಮಕ್ಕಳು. ಕೂಲಿ ಕೆಲಸ ಮಾಡಿ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ ಪತಿ ರಾಜನ್‌ ಕಳೆದ ಆಗಸ್ಟ್‌ನಲ್ಲಿ ಸಾವನ್ನಪ್ಪಿದ್ದು, ಅದಾದ ಬಳಿಕ ಕುಟುಂಬ ಬೀದಿಗೆ ಬಿತ್ತು. ಮಕ್ಕಳನ್ನು ಸಲಹುವುದೇ ಸುಭದ್ರಾಗೆ ದೊಡ್ಡ ಸವಾಲಾಗಿತ್ತು.ಇನ್ನು ಅದರಲ್ಲಿಯೂ ಮೂವರು ಮಕ್ಕಳ ಪೈಕಿ ಒಂದು ಮಗುವಿಗೆ ಸೆರೆಬ್ರಲ್‌ ಪಾಲ್ಸಿ ಎಂಬ ರೋಗ ಇದ್ದು, ಹಾಸಿಗೆ ಹಿಡಿದಿರುವ ಆ ಮಗುವನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣ ಸುಭದ್ರಾ ಕೆಲಸಕ್ಕೂ ಹೋಗಲು ಸಾಧ್ಯವಾಗಿತ್ತಿರಲಿಲ್ಲ.ಹೀಗಿರುವ ಒಂದು ದಿನ ತನ್ನ ಕಿರಿಯ ಮಗನ ಹಿಂದಿ ಟೀಚರ್‌ ಗಿರಿಜಾ ಹರಿಕುಮಾರ್‌ಗೆ ಕರೆ ಮಾಡಿ, ‘ಮಕ್ಕಳಿಗೆ ಊಟ ಹಾಕಲು 500 ರೂ. ಕೊಡಬಹುದಾ ಎಂದು ಕೇಳಿಕೊಂಡಿದ್ದು, ಕೂಡಲೇ ಶಿಕ್ಷಕಿ ಗಿರಿಜಾ 1,000 ರೂ. ನೀಡಿದ್ದರು. ಕೆಲ ದಿನಗಳ ಅನಂತರ ಸುಭದ್ರಾರ ಮನೆಗೆ ಹೋದಾಗ ಗಿರಿಜಾ ಅವರಿಗೆ ಕುಟುಂಬದ ನೈಜ ಸ್ಥಿತಿ ನೋಡಿದ್ದಾರೆ.ಸುಭದ್ರಾ ಮನೆಸ್ಥಿತಿ ನೋಡಿದ ಶಿಕ್ಷಕಿ ಗಿರಿಜಾ ಸಾಮಾಜಿಕ ಜಾಲತಾಣದಲ್ಲಿ ಈ ಕುಟುಂಬದ ಕಥೆಯನ್ನು ಬರೆದು, ಸಹಾಯ ಮಾಡಲಿಚ್ಛಿಸುವವರು ಮಾಡಲಿ ಎಂದು ಸುಭದ್ರಾರ ಬ್ಯಾಂಕ್‌ ಖಾತೆ ವಿವರವನ್ನು ಅಪ್‌ಲೋಡ್‌ ಮಾಡಿದ್ದರು. ಆದರೆ ಅಚ್ಚರಿ ಎಂಬಂತೆ ಕೇವಲ 48 ಗಂಟೆಗಳಲ್ಲಿ ಸುಭದ್ರಾರ ಖಾತೆಗೆ ಬರೋಬ್ಬರಿ 51 ಲಕ್ಷ ರೂ. ಬಂದು ಜಮೆಯಾಗಿದ್ದು, ಸಹಕರಿಸಿದ ಎಲ್ಲರಿಗೂ ಟೀಚರ್ ಮತ್ತು ಸುಭದ್ರಾ ಧನ್ಯವಾದ ಅರ್ಪಿಸಿದ್ದಾರೆ.