Tuesday, January 21, 2025
ಸುದ್ದಿ

ಅಬುದಾಭಿಯ ಸಚಿವರನ್ನು ಭೇಟಿಯಾದ ಪುತ್ತಿಗೆ ಶ್ರೀಗಳು – ಕಹಳೆ ನ್ಯೂಸ್

ಉಡುಪಿ : ಅಬುದಾಭಿಯಲ್ಲಿಂದು ಸರಕಾರದ ಕ್ಯಾಬಿನೆಟ್ ಮಂತ್ರಿ ,ಸಮಾಜ ಧರ್ಮ ಸಾಮರಸ್ಯ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ರೊಂದಿಗೆ ಪುತ್ತಿಗೆ ಶ್ರೀಗಳ ಸೌಹಾರ್ದ ಭೇಟಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ,ಸಮಾಜದಲ್ಲಿ ಪರಸ್ಪರ ಶಾಂತಿ ಸೌಹಾರ್ದವನ್ನು ಗಟ್ಟಿಗಳಿಸುವಲ್ಲಿ ಧಾರ್ಮಿಕ ನಾಯಕರು ಕೈಗೊಳ್ಳುವ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀಪಾದರ ಸಮಾಜಮುಖಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಶ್ರೀಗಳು ವಿವರಿಸಿದರು. ಸಚಿವರು ಶ್ರೀಗಳ ವಿಶ್ವಶಾಂತಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂಬರುವ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ಪ್ರೀತಿಪೂರ್ವಕ ಆಹ್ವಾನಿಸಿದಾಗ ಮಂತ್ರಿಗಳು ಸಂತೋಷದಿಂದ ಒಪ್ಪಿಗೆ ಸೂಚಿಸಿದರು.