Monday, January 20, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿಸುಳ್ಯ

ಬೆಳ್ಳಾರೆಯ ಉದ್ಯಮಿಯ ಅಪಹರಣ ಯತ್ನ: ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಸಹಿತ 6 ಮಂದಿಯ ವಿರುದ್ದ FIR ದಾಖಲು – ಕಹಳೆ ನ್ಯೂಸ್

ಸುಳ್ಯ: ಬೆಳ್ಳಾರೆಯ ಯುವ ಉದ್ಯಮಿಯನ್ನು ಆಂಬ್ಯುಲೆನ್ಸ್ ನಲ್ಲಿ ಕೂಡಿ ಹಾಕಿ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಉದ್ಯಮಿಯ ತಂದೆ, ಪತ್ನಿ, ಅತ್ತೆ ಸಹಿತ ಹಲವರ ಮೇಲೆ ಪ್ರಕರಣ ದಾಖಲಾಗಿದೆ. ಉದ್ಯಮಿಯ ತಾಯಿ ನೀರಜಾಕ್ಷಿ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಸಹಿತ 6 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೀರಜಾಕ್ಷಿ ಅವರ ಮಗ ನವೀನ್‌ ಕುಮಾರ್‌ ಹಾಗೂ ಆತನ ಪತ್ನಿ ಮಧ್ಯೆ ಮೂರು ತಿಂಗಳಿಂದ ವೈಮನಸ್ಸು ಉಂಟಾಗಿದ್ದು, ಆತನ ಪತ್ನಿ ತವರು ಮನೆಗೆ ಹೋಗಿದ್ದು ಡಿ.18ರಂದು ಸೊಸೆ ಹಾಗೂ ಆಕೆಯ ಹೆತ್ತವರು, ಸಂಬಂಧಿಕರು ಮಾತುಕತೆ ನಡೆ ಸಿದ್ದು, ಈ ವೇಳೆ ನವೀನ್‌ ಅವರು ಪತ್ನಿ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದೇ ಕಾರಣದಿಂದ ಡಿ.19ರಂದು ದೂರುದಾರರ ಗಂಡ ಮಾಧವ ಗೌಡ, ಸೊಸೆ ಸ್ಪಂದನಾ, ಸೊಸೆಯ ತಾಯಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ ಪರಶುರಾಮ, ತಮ್ಮ ಸ್ಪರ್ಶಿತ್‌ ಎಂಬವರು ನವೀನ್‌ ಕುಮಾರ್‌ನನ್ನು ಅಪಹರಿಸಿಕೊಂಡು ಹೋಗಿದ್ದು, ತಡೆಯಲು ಹೋದ ದೂರುದಾರರನ್ನು ಹಾಗೂ ಅವರ ಹಿರಿಯ ಸೊಸೆಯನ್ನು ಆರೋಪಿಗಳು ಹೊಡೆದು ಗಾಯ ಮಾಡಿದ್ದರು. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.