ಕಂಪಾನಿಯೋ ಮಂಗಳೂರು ಇದರ ಸಹಯೋಗದಲ್ಲಿ ನಡೆದ ಉಚಿತ ಪೂಟ್ ಥೇರೆಪಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಮಾಹಿತಿ ಶಿಬಿರ – ಕಹಳೆ ನ್ಯೂಸ್
ವೀರಕಂಬ ಗ್ರಾಮ ಪಂಚಾಯತ್, ಮಾತೃಶ್ರೀ ಗೆಳೆಯರ ಬಳಗ ವೀರಕಂಬ, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರಾಥಮಿಕ ಶಾಲೆ ಮಜಿ ಹಾಗೂ ಕಂಪಾನಿಯೋ ಮಂಗಳೂರು ಇದರ ಸಹಯೋಗದಲ್ಲಿ ನಡೆದ ಉಚಿತ ಪೂಟ್ ಥೇರೆಪಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಮಾಹಿತಿ ಶಿಬಿರ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಯುತ ದಿನೇಶ್ ರವರ ಅಧ್ಯಕ್ಷತೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ನಡೆಯಿತು.
ಕಂಪೆನಿಯೊ ಇದರ ದಕ್ಷಿಣ ಭಾರತ ರಾಜ್ಯಗಳ ಮುಖ್ಯಸ್ಥರಾದ ಶ್ರೀಯುತ ರತ್ನಾಕರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ, ಯಾವುದೇ ಔಷಧಿಗಳನ್ನು ಬಳಸದೆ ಪೂಟ್ ಥೇರೆಪಿ ಮಾಡುದರ ಮೂಲಕ ಆರೋಗ್ಯವಂತರಾಗುವ ಬಗ್ಗೆ ಹಾಗೂ ಪೂಟ್ ಥೇರೆಪಿ ಯಂತ್ರವನ್ನು ಬಳಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಶಾಸಕರಾದ ಏ ರುಕ್ಮಯ ಪೂಜಾರಿಯವರು ತಾನು ಪೂಟ್ ಥೇರೆಪಿ ಮಾಡಿಕೊಂಡಿದ್ದು ಅದರ ಮೂಲಕ ತನ್ನ ಆರೋಗ್ಯದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಕಳೆದ 15 ದಿನಗಳಿಂದ ಉತ್ತಮ ರೀತಿಯಲ್ಲಿ ಉಚಿತ ಪೂಟ್ ಥೇರೆಪಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯೋ ಇದರ ಶ್ರೀಯುತ ಶ್ರೀಧರ ಪೂಜಾರಿ, ಶ್ರೀಮತಿ ಸುನಿತಾ ಹಾಗೂ ಶ್ರೀಮತಿ ಸೌಜನ್ಯ ಇವರನ್ನು ಅಭಿನಂದಿಸಲಾಯಿತು
ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ,ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಉಪಸ್ಥಿತರಿದ್ದರು
ಮಜಿ ಶಾಲಾ ಮಕ್ಕಳು ಪ್ರಾರ್ಥಿಸಿ ಕಂಪೆನಿಯೋ ಇದರ ಮಂಗಳೂರು ವಿಭಾಗದ ಮುಖ್ಯಸ್ಥರಾದ ಶ್ರೀಯುತ ಶ್ರೀಧರ್ ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಾಲಾ ಸಹ ಶಿಕ್ಷಕಿ ಶ್ರೀಮತಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.