Recent Posts

Monday, January 20, 2025
ಅಂತಾರಾಷ್ಟ್ರೀಯಕ್ರೈಮ್ಸಿನಿಮಾಸುದ್ದಿ

ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಅರೆಬೆತ್ತಲೆ ಬಟ್ಟೆ ತೊಟ್ಟ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ – ಕಹಳೆ ನ್ಯೂಸ್

ಮುಂಬೈ: ಉರ್ಫಿ ಜಾವೇದ್​ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ತುಂಬಾ ಗೊತ್ತಿರುವವರಿಗೆ ಆಕೆಯ ಅರೆಬರೆ ಮೈಮಾಟ ಪ್ರದರ್ಶನವೇ ಕಣ್ಮುಂದೆ ಬರುತ್ತದೆ. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುವ ಈ ಬಾಲಿವುಡ್​ ನಟಿ, ಜಾಲತಾಣದಲ್ಲಿ ತಮ್ಮ ಅರೆಬರೆ ಬಟ್ಟೆಯಿಂದಲೇ ಫೇಮಸ್​ ಆಗಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅರೆಬೆತ್ತಲೆ ದೇಹ ಕಾಣುವಂತೆ ಪ್ರತಿನಿತ್ಯ ವಿಭಿನ್ನ ಉಡುಗೆ ತೊಟ್ಟು ಮುಂಬೈ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ಇನ್​ಸ್ಟಾಗ್ರಾಂ ಇಣುಕಿ ನೋಡಿದರೆ ಅಲ್ಲಿ ಅರೆಬೆತ್ತಲೆ ಫೋಟೋಗಳ ರಾಶಿಯೇ ಇದೆ. ಇದೇ ಕಾರಣಕ್ಕೆ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇತ್ತೀಚೆಗಷ್ಟೇ ದುಬೈಗೆ ಭೇಟಿ ನೀಡಿರುವ ಉರ್ಫಿ, ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಅವರ ಮೈಮಾಟ ಪ್ರದರ್ಶನ.

ಮಂಗಳವಾರ ಫ್ಯಾಶನ್​ ಇನ್ಫ್ಲುಯೆನ್ಸರ್​ ಉರ್ಫಿ ಅವರನ್ನು ದುಬೈ ಅಧಿಕಾರಿಗಳಿ ಬಂಧಿಸಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ. ಆದರೆ, ಈ ಸುದ್ದಿಯ ಬಗ್ಗೆ ಉರ್ಫಿ ಆಪ್ತ ಮೂಲಗಳಾಗಲಿ ಖಚಿತ ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಬಂಧನದ ಸುದ್ದಿ ವರಿಯಾಗಿವೆ.

ಎಂದಿನಂತೆ ಇನ್​ಸ್ಟಾಗ್ರಾಂಗೆ ವಿಡಿಯೋ ಮಾಡಲು ಉರ್ಫಿ, ಅರೆಬರೆ ಬಟ್ಟೆ ಹಾಕಿಕೊಂಡಿದ್ದರು. ಬಟ್ಟೆಯಿಂದ ಯಾವುದೇ ತೊಂದರೆ ಇರಲಿಲ್ಲ. ಆದರೆ, ಉರ್ಫಿ ದುಬೈನ ಸಾರ್ವಜನಿಕ ಪ್ರದೇಶದಲ್ಲಿ ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ. ಉರ್ಫಿ ವಿಡಿಯೋ ಮಾಡಲು ಹೋಗಿದ್ದ ಸ್ಥಳದಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲ. ಹೀಗಾಗಿ ಆಕೆಯನ್ನು ದುಬೈ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇನ್ನು ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ. (ಏಜೆನ್ಸೀಸ್​)