Monday, January 27, 2025
ಸುದ್ದಿ

ಡಿ.31-ಜ.1ರವರೆಗೆ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಭಜನಾ ಮಂದಿರ(ರಿ) ಕಾರಾಜೆ ಸಜೀಪಮೂಡದಲ್ಲಿ ಶ್ರೀ ಆಂಜನೇಯ ದೇವರ ನವೀಕರಣ ಪುನಃ ಪ್ರತಿಷ್ಟೆ ಹಾಗೂ ಆಂಜನೇಯ ಗಾಯತ್ರಿ ಯಾಗ -ಕಹಳೆ ನ್ಯೂಸ್

ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಭಜನಾ ಮಂದಿರ(ರಿ) ಕಾರಾಜೆ ಸಜೀಪಮೂಡದಲ್ಲಿ ವೇದಮೂರ್ತಿ ಶ್ರೀ ಶಿವಾನಂದ ಐತಾಳ ದಾಸಬೈಲು ಇವರ ಪೌರೋಹಿತ್ಯದಲ್ಲಿ ಶ್ರೀ ಆಂಜನೇಯ ದೇವರ ನವೀಕರಣ ಪುನಃ ಪ್ರತಿಷ್ಟೆ ಹಾಗೂ ಆಂಜನೇಯ ಗಾಯತ್ರಿ ಯಾಗವು ಇದೇ ಬರುವ ಡಿ.31 ಮತ್ತು ಜನವರಿ 1ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.31ರಂದು ಸಂಜೆ 5 ಗಂಟೆಗೆ ಪ್ರಾರ್ಥನೆ, ಆಲಯ ಸ್ವೀಕಾರ, ಶುದ್ಧ ಪುಣ್ಯಾಹ, ಸಪ್ತ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತುಬಲಿ ನಂತರ ಪ್ರಸಾದ ವಿತರಣೆ ನಡೆಯಲಿದೆ. ಆ.1ರಂದು ಬೆಳಗ್ಗೆ 6ಗಂಟೆಗೆ ಶುದ್ಧ ಪುಣ್ಯಾಹ, ಗಣಪತಿ ಯಾಗ, ಧನುರ್ಲಗ್ನ ಮುಹೂರ್ತದಲ್ಲಿ ಶ್ರೀ ಆ0ಜನೇಯ ದೇವರ ಪುರ್ನ ಪ್ರತಿಷ್ಟೆ, ಬೆಳಗ್ಗತೆ 9ರಿಂದ ಆಂಜನೇಯ ಗಾಯತ್ರಿ ಯಾಆಗ, ಯಾಗ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಬಲೆ ತೆಲಿಪಾಲೆ, ಮಜಾಭಾರತ ಮತ್ತು ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ ಸಾರಥ್ಯದ ಮಸ್ಕಿರಿ ಕುಡ್ಲ ತಂಡದಿಂದ ಕಾಮಿಡಿ ಶೋ, ಷಣ್ಮುಖ ಕಲಾ ಕೇಂದ್ರದಿಂದ ಸಂಗೀತ ಕಚೇರಿ, ಯುವ ಬಾಗವತ ಚಿನ್ಮಯ್ ಭಟ್ ಕಲ್ಲಡ್ಕ ಇವರ ಸಾರಥ್ಯದಲ್ಲಿ ಯಕ್ಷ-ಗಾನ-ನಾಟ್ಯ-ವೈಭವ, ಜೊತೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

ಸಂಜೆ 6.30ಕ್ಕೆ ಧರ್ಮಸಭೆ ನಡೆಯಲಿದ್ದು, ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರು ಇದರ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಚನ ನೀಡಲಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬಂಟ್ವಾಳಾ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ರವೀಂದ್ರನಾಥ್ ಭಂಡಾರಿ ಪುಣ್ಕೆಮಜಲು, ಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್, ಶ್ರೀ ನಾಲ್ಕೈತ್ತಾರು ದೇವಸ್ಥಾನದ ಪರಿಚಾರಕರಾದ ಶಂಕರ್ ಯಾನೆ ಕೋಚ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯಕಾರಿನೀ ಸದಸ್ಯ ಶ್ರೀಕಾಂತ್ ಶೆಟ್ಟಿ, ಸಂಕೇಶ, ಬಂಟ್ವಾಳ ತಾಲೂಕು ಪಂಚಾಯತ್‍ನ ಮಾಜಿ ಅಧ್ಯಕ್ಷ ಯಶವಂತ ಡಿ ದೇರಾಜೆ, ಸಜೀಪಮೂಡ ಗ್ರಾಮ ಪಮಚಾಯತ್ ಅಧ್ಯಕ್ಷೆ ಹರಿಣಾಕ್ಷಿ, ಪುರೋಹಿತರಾದ ವೇದಮೂರ್ತಿ ಶ್ರೀ ಶಿವಾನಂದ್ ಐತಾಳ್ ದಾಸಬೈಲು, ಪ್ರಕಾಶ್ ಭಟ್, ವಾಸುದೇವ ಮೂಲ್ಯ, ಚಂದ್ರನಾಥ್ ಜೋಗಿ ಮಿತ್ತಕೆರೆ, ಪ0ಚಾಯತ್ ಸದಸ್ಯರಾದ ಸೀತರಾಮ ಅಗೋಳಿಬೆಟ್ಟು, ಸೋಮನಾಥ ಬಂಗೇರ, ಕುಶಲಾಕ್ಷ ಸಂಕೇತ, ಮಹಾದೇವಿ ಕಾರಾಜೆ,, ಕಾರಾಜೆ ವ್ಯಾಯಾಮ ಶಾಲೆಯ ಅಧ್ಯಕ್ಷ ನವೀನ್ ಗಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕಾರಾಜೆ, ಮಹಿಳಾ ಮಂಡಳಿ ಅಧ್ಯಕ್ಷೆ ಗಾಯತ್ರಿ ಕಾರಾಜೆ, ಭಾಗವಹಿಸಲಿದ್ದಾರೆ. ಸಂಜೆ 8.30ರಿಂದ ನೇತ್ಯ ವೈವಿಧ್ಯ ಪುಣ್ಯ ಭುಮಿ ಭಾರತ ಕಾರ್ಯಕ್ರಮ ನಡೆಯಲಿದೆ.