Recent Posts

Friday, November 22, 2024
ಸುದ್ದಿ

ಬೆಳ್ತಂಗಡಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಡಿ.25 ರಿಂದ 26 ರವರೆಗೆ ನಡೆಯಲಿರುವ ವಾರ್ಷಿಕ ಜಾತ್ರಾಮಹೋತ್ಸವ – ಕಹಳೆ ನ್ಯೂಸ್

ಶ್ರೀ ಅನಂತಪದ್ಮನಾಭ ದೇವಸ್ಥಾನ, ಅನಂತೋಡಿ ಬೆಳ್ತಂಗಡಿಯಲ್ಲಿ ಡಿಸೆಂಬರ್ 25 ರಿಂದ 26 ರವರೆಗೆ ನಡೆಯಲಿರುವ ವಾರ್ಷಿಕ ಜಾತ್ರಾಮಹೋತ್ಸವದ ಪ್ರಯುಕ್ತ ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾತ್ರಾಮಹೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯಾ ಡಾ. ವೀರೇಂದ್ರ ಹೆಗ್ಡೆ, ಶೀಮತಿ ಹೇಮಾವತಿ ವೀ ಹೆಗ್ಗಡೆ, ಮತ್ತು ಉಜಿರೆಯ ಯು.ವಿಜಯರಾಘವ ಪಡ್ವೆಟ್ನಾ, ಭಾಗಿಯಾಗಲಿದ್ದಾರೆ. ಬ್ರಹ್ಮಶ್ರೀ ವೇ| ಮೂ| ನೀಲೇಶ್ವರ ವಾಸುದೇವ ತಂತ್ರಿಗಳ ಹಾಗೂ ವೇ| ಮೂ| ನೀಲೆಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎರಡು ದಿನದ ಜಾತ್ರಾ ಮಹೋತ್ಸವವು ನಡೆಯಲಿದೆ.

ಜಾತ್ರಾಮಹೋತ್ಸವದ ಅಂಗವಾಗಿ ಡಿ.25 ರಂದು ಬೆಳ್ಳಗ್ಗೆ ಗಣಹೋಮ, ಊರ ಭಕ್ತಾಧಿಗಳಿಂದ ಹಸಿರು ವಾಣಿ ಸಮರ್ಪಣೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಗಳು, ಮಹಾಪೂಜೆ ,ನಂತರದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀ ಮಹಾ ವಿಷ್ಣು ಯಾಗ ನಡೆಯಲಿದೆ. ರಾತ್ರಿ 10 ರಿಂದ ಗಡಿನಾಡ ಕಲಾನಿಧಿ ಕೃಷ್ಣ ಜಿ ಮಂಜೇಶ್ವರ ಸಾರಥ್ಯದ ಮಲ್ಲ ಸಂಗತಿಯೇ ಅತ್ತ್ ತುಳು ಹಾಸ್ಯಮಯ ನಾಟಕ ಜರಗಲಿದೆ.

ಡಿಸೆಂಬರ್ 26 ರಂದು ಗಣಪತಿ ಹೋಮ, ಶೀ ದೇವರ ಬಲಿ ಹೊರಟು ಉತ್ಸವ ದರ್ಶನ ಬಳಿ, ನವಕಲಶ ಪೂಜೆ, ಮಹಾಪೂಜೆ ನಂತರದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ದುರ್ಗಾ ಪೂಜೆ, ಶೀ ಅನಂತಪದ್ಮನಾಭ ದೇವರಿಗೆ ಪ್ರಸನ್ನ ರಂಗಪೂಜೆ, ಶೀ ಅನಂತಪದ್ಮನಾಭ ಮಹಿಳಾ ತಂಡದಿಂದ ಕುಣಿದ ಭಜನೆ , ರಾತ್ರಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರು ಪಾಲ್ಗೋಳ್ಳಲಿದ್ದಾರೆ.

ಧಾರ್ಮಿಕ ಭಾಷಣಗಾರರಾಗಿ ಸಂಸ್ಕøತ ವಿಭಾಗದ ಮುಖ್ಯಸ್ಥರಾದ ಡಾ ಶೀಶ ಕುಮಾರ್ ಎಂ.ಕೆ .ಆಗಮಿಸಲಿದ್ದಾರೆ. ರಾತ್ರಿ ಸುಮಾರು 10 ಕ್ಕೆ ಪರಿವಾರ ದೈವಗಳಾದ ಶೀ ರಕ್ತೆಶ್ವರೀ ಭೈರವ ಕಲ್ಲುರ್ಟಿ ಪಂಜುರ್ಲಿ ದೈವಗಳಿಗೆ ಸಿರಿಸಿಂಗಾರ ನೃತ್ಯ ಬಲಿ ಸೇವೆ ನಡೆಯಲಿದೆ.

ಜಾತ್ರಾಮಹೋತ್ಸಕ್ಕೆ ಭಕ್ತಾಧಿಗಳು ತನು-ಮನ-ಧನಗಳಿಂದ ಸಹಕಾರ ನೀಡಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.