” ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ” ಪ್ರಧಾನಿ ಆಗಿದ್ದ ವೇಳೆ ಮಹಿಳೆಯೊಬ್ಬರ ಜತೆ ಸೆಕ್ಸ್ ಕುರಿತು ಫೋನ್ ಮೂಲಕ ಇಮ್ರಾನ್ ಖಾನ್ ಮಾತುಕತೆ ; ಪಾಕ್ ಮಾಜಿ ಪ್ರಧಾನಿ ಖಾನ್ ಅಶ್ಲೀಲ ಆಡಿಯೋ ವೈರಲ್..! – ಕಹಳೆ ನ್ಯೂಸ್
ಪಾಕಿಸ್ತಾನ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರದ್ದು ಎನ್ನಲಾದ ಸೆಕ್ಸ್ ಸಂಭಾಷಣೆಯ 2 ಆಡಿಯೋ ವೈರಲ್ ಆಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಧಾನಿ ಆಗಿದ್ದ ವೇಳೆ ಮಹಿಳೆಯೊಬ್ಬರ ಜತೆ ಸೆಕ್ಸ್ ಕುರಿತು ಫೋನ್ ಮೂಲಕ ಇಮ್ರಾನ್ ಖಾನ್ ಮಾತುಕತೆ ನಡೆಸಿರುವ ಆಡಿಯೋ ಒಂದಾದರೆ, ಇನ್ನೊಂದು ಇತ್ತೀಚಿನದ್ದು ಎನ್ನಲಾಗಿದೆ.
ಅಶ್ಲೀಲವಾಗಿ ಮಹಿಳೆ ಜತೆ ಮಾತನಾಡುತ್ತಾ ತನ್ನ ಬಳಿ ಬರುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಮಹಿಳೆಯು ನಿಮ್ಮಿಂದಾಗಿ ನನ್ನ ಖಾಸಗಿ ಅಂಗ ನೋಯುತ್ತಿದ್ದೆ… ಈಗ ಬರಲು ಆಗಲ್ಲ, ನಾಳೆ ಬರುವೆ ಎಂದಿದ್ದಾಳೆ.
ಇಮ್ರಾನ್ ಖಾನ್ ಕಾಲಿಗೆ ಗುಂಡು ತಿಂದ ಕಥೆ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ ಮುಂದಿನ 5 ವರ್ಷಗಳ ಕಾಲ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಕ್ಕೆ ಒಳಗಾಗಿದ್ದರು. ಕಳೆದ ತಿಂಗಳು ಪಾಕಿಸ್ತಾನ ಸರ್ಕಾರದ ಅವರು ಮಾಡಿದ್ದ ಭಾಷಣವನ್ನು ಎಲ್ಲ ಮಾಧ್ಯಮದಿಂದಲೂ ತೆಗೆದು ಹಾಕಲಾಗಿತ್ತು. ಪಾಕಿಸ್ತಾನದ ರಾಷ್ಟ್ರೀಯ ಸುರಕ್ಷತೆಗೆ ಆಪತ್ತು ತರುವ ಈ ಭಾಷಣ ಜನರ ನಡುವೆ ದ್ವೇಷವನ್ನೂ ಮೂಡಿಸುತ್ತದೆ ಎಂಬ ಕಾರಣ ನೀಡಿ ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ನಿಯಂತ್ರಣ ಮಂಡಳಿ (PEMRA), ಇಮ್ರಾನ್ ಖಾನ್ ಭಾಷಣ ಪ್ರಸಾರ ಮಾಡದಂತೆ ಸೂಚಿಸಿತ್ತು. ಇದೀಗ ಸೆಕ್ಸ್ ಸಂಭಾಷಣೆಯ 2 ಆಡಿಯೋ ವೈರಲ್ ಆಗಿದ್ದು, ಇಮ್ರಾನ್ ಖಾನ್ ಭಾರೀ ಸುದ್ದಿಯಾಗುತ್ತಾ ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ.
ಆಡಿಯೋದಲ್ಲಿ ಏನಿದೆ?: ಇಮ್ರಾನ್ ಖಾನ್ ಅವರು ಮಹಿಳೆಯೊಬ್ಬರಿಗೆ ತನ್ನ ಬಳಿ ಬರುವಂತೆ ಕರೆಯುತ್ತಾರೆ. ಅದಕ್ಕೆ ಆ ಮಹಿಳೆ ‘ನಿಮ್ಮಿಂದಾಗಿ ನನ್ನ ಸ್ತನಗಳಿಗೆ ತುಂಬಾ ನೋವಾಗಿದೆ. ಈಗ ಬರಲು ಆಗಲ್ಲ. ನಾಳೆ ಬರುತ್ತೇನೆ’ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, ‘ನನ್ನ ಮನೆಯವರು, ಮಕ್ಕಳು ಬರುವುದರಿಂದ ಸಾಧ್ಯವೇ ಆ ದಿನ ನನ್ನ-ನಿನ್ನ ಭೇಟಿ ಸಾಧ್ಯವೇ ಎಂದು ನೋಡುತ್ತೇನೆ. ಅವರ ಭೇಟಿ ತಡವಾಗಬಹುದು. ನನ್ನ ಎಲ್ಲ ಕಾರ್ಯಕ್ರಮಗಳನ್ನು ಬದಲಿಸುತ್ತೇನೆ. ನಾಳೆ ತಿಳಿಸುತ್ತೇನೆ’ ಎಂದು ಹೇಳುತ್ತಾರೆ. ಹೀಗೆ ಸಂಭಾಷಣೆ ಸಾಗಿದ್ದು, ಅಶ್ಲೀಲ ಪದಗಳೂ ಬಳಕೆಯಾಗಿವೆ.
ಅಂದಹಾಗೇ ಈ ಆಡಿಯೋವನ್ನು ಮೊದಲಿಗೆ ಲೀಕ್ ಮಾಡಿದ್ದು ಪಾಕಿಸ್ತಾನಿ ಪತ್ರಕರ್ತ ಸೈಯದ್ ಅಲಿ ಹೈದರ್. ಈತ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಆಡಿಯೋ ಲೀಕ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ದಿನಗಳಿದ್ದು, ಈ ಸಂದರ್ಭದಲ್ಲಿ ಸೆಕ್ಸ್ ಆಡಿಯೋ ವೈರಲ್ ಆಗಿರುವುದು ಎದುರಾಳಿ ಪಕ್ಷಗಳಿಗೆ ಅಸ್ತ್ರವಾಗಿದೆ. ಇದು ಇಮ್ರಾನ್ ಖಾನ್ ಅವರದ್ದೇ ಧ್ವನಿ. ಅವರು ಪ್ರಧಾನಿಯಾದಾಗ ಕಚೇರಿಯಲ್ಲಿ ಏನೆಲ್ಲಾ ಮಾಡುತ್ತಿದ್ದರು ಎಂಬುದಕ್ಕೆ ಈ ಸೆಕ್ಸ್ ಆಡಿಯೋವೇ ಉದಾಹರಣೆ ಎಂದು ಪಾಕಿಸ್ತಾನ್ ಪೀಪಲ್ ಪಾರ್ಟಿ ಹಾಗೂ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷಗಳು ಗಂಭೀರ ಆರೋಪ ಮಾಡಿವೆ. ಆದರೆ ಇದನ್ನು ಅಲ್ಲಗೆಳೆದಿರುವ ಪಿಟಿಐ(ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್) ಪಕ್ಷವು, ಇದು ಫೇಕ್ ಆಡಿಯೋ. ಆ ಧ್ವನಿ ಇಮ್ರಾನ್ ಖಾನ್ ಅವರದ್ದಲ್ಲ ಎಂದು ಸಮರ್ಥಿಸಿಕೊಂಡಿದೆ.(ಏಜೆನ್ಸೀಸ್)