Friday, November 22, 2024
ಸುದ್ದಿ

Breaking News : ರಾಮಚಂದ್ರಾಪುರ ಮಠದ ಆಡಳಿತದಿಂದ ಮತ್ತೆ ಗೋಕರ್ಣ ದೇವಾಲಯ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ; ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ವದ ಆದೇಶ – ಕಹಳೆ ನ್ಯೂಸ್

ಬೆಂಗಳೂರು, ಆಗಷ್ಟ್ 10 : ಹೊಸನಗರ ರಾಮಚಂದ್ರಾಪುರ ಮಠಕ್ಕೆ ಸರ್ಕಾರಿ ಆದೇಶದ ಮುಖಾಂತರ ಹಸ್ತಾಂತರಿಸಲ್ಪಟ್ಟಿದ್ದ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯವನ್ನು ಇದೀಗ ಹೈಕೋರ್ಟ್ ರದ್ದು ಪಡಿಸಿ ತೀರ್ಪು ನೀಡಿದೆ. ಇದರಿಂದ ರಾಮಚಂದ್ರಪುರ ಮಠಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.

ಹಿನ್ನೆಲೆ :.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲಿ ಆಗಷ್ಟ್ 12 2008 ರಂದು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯವನ್ನು ಗೋಕರ್ಣ ಮಂಡಲಾಧೀಶ್ವರ ಬಿರುದಾಂಕಿತ ರಾಮಚಂದ್ರಾಪುರ ಮಠಕ್ಕೆ ಸರ್ಕಾರ ಬಿಟ್ಟುಕೊಟ್ಟಿತ್ತು. ಅದರ ವಿರುದ್ಧ ಉಪದೀವಂತ ಮಂಡಳಿ ದೂರನ್ನು ನೀಡಿತ್ತು. ಕಳೆದ ಹತ್ತು ವರ್ಷಗಳಿಂದ ಅಂದರೆ ಮಠದ ಸುಪರ್ದಿಗೆ ಬಂದ ಬಳಿಕ ದೇವಾಲಯದ ಸ್ವಚ್ಛತೆ ಹಾಗೂ ಪೂಜಾ ಕಾರ್ಯಗಳಲ್ಲಿ ಸುವ್ಯವಸ್ಥೆ ಮಾಡಲಾಗಿತ್ತು. ನಂತರ ಬಂದ ಸರ್ಕಾರ ದೇವಾಲಯವನ್ನು ಮರಳಿ ಸರ್ಕಾರಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆಸಿತ್ತು. ವಿಚಾರ ಕೋರ್ಟ್ ಮೆಟ್ಟಿಲೇರಿ ಇದೀಗ ಕೋರ್ಟ್ ಆದೇಶದಂತೆ ಮತ್ತೆ ದೇವಾಲಯ ಧಾರ್ಮಿಕ ದತ್ತಿ ಇಲಾಖೆ ತೆಕ್ಕೆಗೆ ಬಂದಿದೆ.

ಕೋರ್ಟ್ ಗೆ ಮನವಿ ಮಾಡಿರುವ ಮಠದ ವಕೀಲರು :


ಈ ನಡುವೆ ಮಠದ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದು ನ್ಯಾಯಾಲಯ ಕೇಳುವ ಯಾವುದೇ ದಾಖಲೆಗಳನ್ನು ಮಠವು ನೀಡಲು ಸಿದ್ಧವಿದೆ. ಈ ಆದೇಶವನ್ನು ತಡೆಹಿಡಿಯಬೇಕು, ಮತ್ತೆ ದೇವಾಲಯವನ್ನು ಮಠಕ್ಕೆ ನೀಡಬೇಕು ಎಂದು ಮಠದ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.