ಹಾಡು ಹಗಲೇ ಕಾಲೇಜಿನಲ್ಲಿ ಹಗ್ ಕಿಸ್..! ಭಿನ್ನಕೋಮಿನ ಜೋಡಿಗಳ ರೋಮ್ಯಾನ್ಸ್ : ಬೆಳ್ತಂಗಡಿಯಲ್ಲಿ ಲವ್ ಜಿಹಾದ್ ಕಪಲ್ಸ್ ಗೆ ಗೇಟ್ ಪಾಸ್ – ಕಹಳೆ ನ್ಯೂಸ್
ಬೆಳ್ತಂಗಡಿ : ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತಹದ್ದೇ ಪ್ರಕರಣವೊಂದು ಬೆಳ್ತಂಗಡಿ ಕಾಲೇಜಿನಲ್ಲಿ ನಡೆದಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ರೊಮ್ಯಾನ್ಸ್ ಮಾಡಿದ್ದ ಅನ್ಯಕೋಮಿನ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಮಾಜಿ ಶಾಸಕ ವಸಂತ್ ಬಂಗೇರಾ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿ ಹಾಗೂ ಹಿಂದೂ ವಿದ್ಯಾರ್ಥಿನಿ ಹಗ್ ಮತ್ತು ಕಿಸ್ ಮಾಡಿಕೊಂಡಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು, ಈ ಘಟನೆಯ ಬಳಿಕ ಮುಸ್ಲಿಂ ವಿದ್ಯಾರ್ಥಿಗೆ ಹಿಂದೂ ಕಾರ್ಯಕರ್ತರು ಧಮ್ಕಿ ಕೂಡ ಹಾಕಿದ್ದರು. ಲವ್ ಜಿಹಾದ್ ಮಾಡಿದರೆ ನಿನ್ನನ್ನು ಸಾಯಿಸೋದಾಗಿ ಆವಾಜ್ ಹಾಕಿದ್ದರು ಎನ್ನಲಾಗಿದೆ.
ಈ ಘಟನೆ ಸಂಬಂಧ ಇದೀಗ ಕಾಲೇಜು ಆಡಳಿತ ಮಂಡಳಿ ಇಬ್ಬರೂ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ. ಆದರೆ ಕೇವಲ ಹಿಂದೂ ವಿದ್ಯಾರ್ಥಿನಿಯನ್ನು ಸಸ್ಪೆಂಡ್ ಮಾಡಿ ಮುಸ್ಲಿಂ ವಿದ್ಯಾರ್ಥಿಗೆ ಕಾಲೇಜಿಗೆ ಬರಲು ಅವಕಾಶ ನೀಡಿದ್ದಾರೆ ಎಂಬ ವದಂತಿ ಬೆಳ್ತಂಗಡಿ ವಲಯದಲ್ಲಿ ಹರಿದಾಡಿದ್ದು, ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೆÇಲೀಸ್ ಠಾಣೆಗೆ ಕಾಲೇಜು ಆಡಳಿತ ಮಂಡಳಿ ದೂರನ್ನು ನೀಡಿದೆ. ಕೋಮುದ್ವೇಷದ ಹಿನ್ನೆಲೆಯನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿರುವವರ ಬಗ್ಗೆ ಠಾಣೆಗೆ ಕಾಲೇಜು ಆಡಳಿತ ಮಂಡಳಿ ಕಂಪ್ಲೇಂಟ್ ನೀಡಿದೆ. ದೂರಿನಲ್ಲಿ ಹಿಂದೂ ವಿದ್ಯಾರ್ಥಿನಿ ಹಾಗೂ ಮುಸ್ಲಿಂ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಕಾಲೇಜು ಆಡಳಿತ ಮಂಡಳಿ ಉಲ್ಲೇಖಿಸಿದೆ.