Friday, January 24, 2025
ದಕ್ಷಿಣ ಕನ್ನಡಯಕ್ಷಗಾನ / ಕಲೆಸುದ್ದಿ

ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು ಕಟೀಲು ದೇವಸ್ಥಾನದ ಸರಹದ್ದಿನಲ್ಲೇ ರಂಗಸ್ಥಳದಲ್ಲಿ ಕುಸಿದುಬಿದ್ದು ಸಾವು..! 15 ದಿವಸದ ಒಳಗೆ ಇಬ್ಬರು ಒಂದೇ ಮೇಳದ ಕಲಾವಿದರ ಅಕಾಲ ಮೃತ್ಯು..! ಮೇಳದ ಆಡಳಿತ ವ್ಯವಸ್ಥೆಯ ಅನಾಚಾರಕ್ಕೆ ಅಮಾಯಕ ಕಲಾವಿದರು ಬಲಿ..!? ಈ ಎರಡು ಸಾವು ತಾಯಿಗೆ ಯಕ್ಷಗಾನ ಸೇವೆ ಸಲ್ಲುತ್ತಿಲ್ಲ ಎಂಬ ಸೂಚನೆಯೇ..!? ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ – ಕಹಳೆ ನ್ಯೂಸ್

ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ಗುರುವಾರ ರಾತ್ರಿ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರಸ್ವತೀ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ತ್ರಿಜನ್ಮ ಮೋಕ್ಷ ಪ್ರಸಂಗ. ಬಾಯಾರು ಅವರು ಶಿಶುಪಾಲನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ರಂಗಸ್ಥಳದಲ್ಲಿ ನಿಂತಿದ್ದ ಗುರುವಪ್ಪ ಬಾಯಾರು ಅವರು ರಂಗಸ್ಥಳದಿಂದ ಕೆಳಗಡೆ ಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ನಿಧನರಾದರೆಂದು ಘೋಷಿಸಲಾಯಿತು.

ಅಷ್ಟಮಂಗಲ ಪ್ರಸಂಗವನ್ನೂ ಬರೆದಿದ್ದ ಅವರು ಕಳೆದ ಮಳೆಗಾಲದಲ್ಲಿ ಮಂಗಳೂರು ಪುರಭವನದಲ್ಲಿ ಯಕ್ಷಗಾನವನ್ನು ಆಡಿಸಿದ್ದರು. ನಾನಾ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು 2013ರಲ್ಲಿ ಕಟೀಲು ಮೇಳಕ್ಕೆ ಸೇರಿದ್ದರು. ಮಧುಕೈಟಭ, ಮುಂತಾದ ಕಿರೀಟ ವೇಷಗಳನ್ನು ಮಾಡುತ್ತಿದ್ದ ಅವರಿಗೆ ಅನೇಕ ಕಡೆ ಸಂಮಾನಗಳು ಸಂದಿವೆ.

15 ದಿವಸದ ಒಳಗೆ ಇಬ್ಬರು ಒಂದೇ ಮೇಳದ ಕಲಾವಿದರ ಅಕಾಲ ಮೃತ್ಯು..! :

ಹೌದು, ಕೆಳದ ಕೆಲ ದಿನದ ಮೊದಲು ಚೌಕಿ ಕೆಲಸ ಮಾಡುತ್ತಿದ್ದ ಕಲಾವಿದರೊಬ್ಬರೂ ಇದೇ ರೀತಿ ಆಕಾಲ‌ ಮೃತ್ಯಹೊಂದಿದ್ದರು. ಇದು ಈಗ ಮತ್ತೊಂದು ಕಲಾವಿದ ಸಹ ಇದೇ ರೀತಿ ಅಕಾಲ ಮೃತ್ಯಹೊಂದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮೇಳದ ಆಡಳಿತ ವ್ಯವಸ್ಥೆಯ ಅನಾಚಾರಕ್ಕೆ ಅಮಾಯಕ ಕಲಾವಿದರು ಬಲಿ..!? ಈ ಎರಡು ಸಾವು ತಾಯಿಗೆ ಯಕ್ಷಗಾನ ಸೇವೆ ಸಲ್ಲುತ್ತಿಲ್ಲ ಎಂಬ ಸೂಚನೆಯೇ..!? ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ : ಈ ವರ್ಷದಿಂದ ಕಟೀಲು ಮೇಳ ಕಾಲಮಿತಿಯ ಯಕ್ಷಗಾನ ಸೇವೆಯನ್ನು ನಡೆಸುತ್ತಾ ಬರುತ್ತಿದ್ದು, ತಾಯಿ ಹೂ ತೆಗೆದಾಗ ಒಪಗಪಿದ್ದಾಳೆ ಎಂದು ಹರಿನಾರಾಯಣ ಆಸ್ರಣ್ಣ ಹೇಳಿದ್ದು, ಅವರ ಮಾರ್ಗದರ್ಶನದಂತೆ ಮೇಳ‌ ಮತ್ತು ಮೇಳದ ಯಜಮಾನ ವ್ಯವಹರಿಸುತ್ತಿದ್ದು, ಕಾಲಮಿತಿಯ ಯಕ್ಷಗಾನ ಸೈ ಎಂದಿದ್ದರು, ಆದರೆ, ಭಕ್ತಾಭಿಮಾನಿಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು, ಆದರೆ ಇದಕ್ಕೆ ಅಸ್ರಣ್ಣ & ಟೀಂ ಕ್ಯಾರೇ ಎನ್ನದೆ ಸೇವೆ ಆರಂಭಿಸಿದರು, ಸೇವೆಯ ಪ್ರಥಮ ದಿನವೇ ಮಳೆ ಬಂದು ಸೇವೆಗೆ ಅಡಚನೆಯಾಗಿತ್ತು, ಹಿಂದೆಂದೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ , ಮತ್ತು ತಾಯಿ ಇದರಿಂದ ಸಂತುಷ್ಠಳಾಗಲಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಆ ದಿನವೇ ಚರ್ಚೆಗಳು ನಡೆಯುತ್ತಿತ್ತು. ಇದೀಗ 2 ಕಲಾವಿದರ ಅಕಾಲ ಮೃತ್ಯು ಮತ್ತಷ್ಟು ಪುಷ್ಠಿ ನೀಡುತ್ತಿದೆ. ತಾಯಿ ಭ್ರಾಮರಿ ಸೂಚನೆ ನೀಡುತ್ತಿದ್ದಾರೆಯೇ..!? ತನಗೆ ಯಕ್ಷಗಾನ ಸೇವೆ ಸಲ್ಲುತ್ತಿಲ್ಲ ಎಂಬ ಮುನ್ಸೂಚನೆಯೇ ಈ ಅಪಶಕುನಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಮೇಳದ ಆಡಳಿತ ಮಂಡಳಿ ಉತ್ತರಿಸಬೇಕಾಗಿದೆ. ಎರಡು ಕಲಾವಿದರ ಮನೆ ಮತ್ತು ಕುಟುಂಬ ಯಕ್ಷಗಾನ ಮೇಳವನ್ನೇ ಅವಲಂಭಿಸಿತ್ತು, ಈದೀಗ ಅವರ ಮನೆಗೆ ಪರಿಹಾರ ನೀಡುವ ಬಗ್ಗೆ ಮೇಳದ ಆಡಳಿತ ಮಂಡಳಿಯು ಮೌನ ವಹಿಸಿದಂತಿದೆ. ಎಂದು ಯಕ್ಷಗಾನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.‌