Thursday, January 23, 2025
ಸುದ್ದಿ

ಭಜನೆ ಹಾಗೂ ಭಜಕರ ಬಗ್ಗೆ, ಮಹಿಳೆಯರ ಚಾರಿತ್ರ‍್ಯದ ಬಗ್ಗೆ ಅವಹೇಳನ ಮಾಡಿದ ಸಂಜೀವ ಪೂಜಾರಿ ಕಾಣಿಯೂರು : ಕಿಡಿಗೇಡಿ ಕೃತ್ಯಕ್ಕೆ ಬೆಳ್ಳಾರೆ ಠಾಣೆಯಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪ್ರಮುಖರಿಂದ ದೂರು ದಾಖಲು – ಕಹಳೆ ನ್ಯೂಸ್

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತರುವಂತೆ ಹಾಗೂ ಭಕ್ತಿ ಭಾವದಿಂದ ನಡೆಸುವ ಭಜನೆ ಹಾಗೂ ಭಜಕರ ಬಗ್ಗೆ, ಮಹಿಳೆಯರ ಚಾರಿತ್ರ‍್ಯದ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನೆ ಮಾಡಿರುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಸಂಜೀವ ಪೂಜಾರಿ ತಾನೂ ಹಿಂದವಾಗಿದ್ದರೂ ಕೂಡ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅವಮಾನವಾಗುವಂತೆ ವರ್ತಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿಯಾಗಿರುವ ಸಂಜೀವ ಪೂಜಾರಿ, ದಿನಾಂಕ 30-12-2021 ರಂದು ಭಾರತ ದೇಶ ಮತ್ತು ಹಿಂದೂ ಸಂತ ಸಮಾಜದ ಬಗ್ಗೆ ಅತಿ ಕೀಳು ಮಟ್ಟಕ್ಕೆ ಬಂದಿದೆ ಎನ್ನುವ ಕಥೆ ಕಟ್ಟಿ ತನ್ನ ಫೇಸ್ ಬುಕ್ ನಲ್ಲಿ ಸಂದೇಶ ರವಾನೆ ಮಾಡಿದ್ದ. ಇದೀಗ 20-12-2022 ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಕುಣಿತ ಭಜನೆಯಿಂದ ಮಲಗಿದ ಭಜನೆ ಎಂಬ ತಲೆ ಬರಹದಲ್ಲಿ ಸುಳ್ಳು ಮತ್ತು ಆಧಾರ ರಹಿತವಾದ ವಿಚಾರವನ್ನು, ತಪ್ಪು ಮಾಹಿತಿಯಿಂದ ಕೂಡಿದಂತಹ ಸಂದೇಶವನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್‌ನಲ್ಲಿ ರವಾನಿದ್ದಾರೆ.

‘ಗುಡ್ಡದ ಮರದಡಿಯಲ್ಲಿ ಮಲಗಿ ಭಜನೆ ಮಾಡುವವರೆಗೆ’ ಎಂಬAತಹ ಕೀಳು ಅಭಿರುಚಿಯ ಅವಹೇಳನಕರವಾದ ಪದ ಬಳಕೆಯನ್ನ ಮಾಡಿದ್ದಾರೆ. ಇನ್ನು ಮಹಿಳೆಯ ಚಾರಿತ್ರ‍್ಯಕ್ಕೆ, ಗೌರವಕ್ಕೆ ಧಕ್ಕೆ ತರುವ ಒಳಾರ್ಥ ಪದ ಬಳಕೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಈ ಫೊಸ್ಟನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಇದೇ ಫೋಸ್ಟ್ನಲ್ಲಿ ಜಾತಿ ದ್ವೇಷ ಬರುವಂತೆ ಕೋಮುಗಲಭೆ ತುಂಬುವAತೆ ಮುಸ್ಲಿಂ ಮತ್ತು ಕ್ರೈಸ್ತ ಹೆಸರನ್ನ ಉಲ್ಲೇಖಿಸಿ, ಹಿಂದೂ ಸಮಾಜದ ಕೋಟ್ಯಾಂತರ ಜನರು ನಂಬಿಕೊAಡು ಆರಾಧಿಸಿಕೊಂಡು ಬಂದಿರುವ, ಆಂಜನೇಯ ದೇವರನ್ನ ಹಿಯಾಳಿಸಿ, ಸಮಾಜದ ಭಿನ್ನ ವರ್ಗಗಳ ಮಧ್ಯ ಗಲಭೆ ಹುಟ್ಟುವಂತೆ ಸಾಮಾಜಿಕ ಸಾಮರಸ್ಯ ಸ್ವಾಸ್ಥ್ಯ ಕೆಡುವ ರೀತಿಯಲ್ಲಿ ಬರೆದಿದ್ದಾರೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯವರ ಬಗ್ಗೆ ಸಾವುಗಳನ್ನು ಉಲ್ಲೇಖಿಸಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಸಂದೇಶ ರವಾನೆ ಮಾಡಿದ್ದಾರೆ.

ಈ ಎಲ್ಲಾ ವಿಚಾರಗಳಿಗೆ ಸಂಬAಧಿಸಿದ ಸಂಜೀವ ಪೂಜಾರಿ ಕಾಣಿಯೂರು ವಿರುದ್ದ ವಿಶ್ವ ಹಿಂದು ಪರಿಷದ್ ಬಜರಂಗದಳ ಪ್ರಮುಖರು ಬೆಳ್ಳಾರೆ ಠಾಣೆಯಲ್ಲಿ ದೂರನ್ನ ನೀಡಿದ್ದು, ಪ್ರಕರಣ ದಾಖಲಾಗಿದೆ.