Wednesday, January 22, 2025
ಸುದ್ದಿ

ವಿದ್ಯುತ್ ಆಘಾತ : ಕೂಲಿಕಾರ್ಮಿಕ ಸ್ಥಳದಲ್ಲೇ ದಾರುಣ ಅಂತ್ಯ..! – ಕಹಳೆ ನ್ಯೂಸ್

ಉಡುಪಿ ಪಡುಬಿದ್ರೆಯ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಭವ್ಯ ಪೆಟ್ರೋಲ್ ಬಂಕ್‌ನ ವಿದ್ಯುತ್ ಕಾಮಗಾರಿ ಸಂದರ್ಭ 19 ವರ್ಷದ ಲಿಂಗರಾಜು ಎಂಬಾತನಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪೆಟ್ರೋಲ್ ಬಂಕ್‌ನ ಅರ್ಥಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಪಿಕ್ಕಾಸಿನಿಂದ ಅಗೆಯುತ್ತಿದ್ದ ಸಂದರ್ಭ ಶಾಕ್ ತಗುಲಿದೆ.

ಗುತ್ತಿಗೆ ಕಾಮಗಾರಿಗೆ ಲಿಂಗರಾಜು, ಮಂಗಳಪ್ಪ, ಎಲ್ಲಪ್ಪ ಹಾಗೂ ಕಿರಣ್ ಅವರು ಬಂದಿದ್ದು, ಲಿಂಗರಾಜು ಶಾಕ್ ತಗುಲಿ ಮೃತಪಟ್ಟರೆ, ಮಂಗಳಪ್ಪ ನವರಿಗೂ ಶಾಕ್ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಪು ವೃತ್ತ ನಿರೀಕ್ಷಕ ಕೆ ಸಿ ಪೂವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.