Sunday, January 19, 2025
ಸುದ್ದಿ

ಚೀನಾ, ಪಾಕಿಸ್ತಾನ ತಕ್ಕ ಉತ್ತರ ಕೊಡಲು ನಾವು ಸಿದ್ಧ – ಬಿಎಸ್ ಧಾನೋವಾ.

ನವದೆಹಲಿ : ಗಡಿ ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿ ಎಸ್ ಧಾನೋವಾ ಹೇಳಿದ್ದಾರೆ. ಸರ್ಜಿಕಲ್ ದಾಳಿಯ ಬಗ್ಗೆ ಸೇನೆಯ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ವಾಯುಸೇನಾ ದಿನವಾದ ಇಂದು, ಮಾಧ್ಯಮ ಸುದ್ದಿಗೋಷ್ಟಿಯನ್ನುದ್ದೇಶಿಸಿ, ಗಡಿಯುದ್ದಕ್ಕೂ ಕಾರ್ಯಾಚರಣೆ ನಡೆಸಲು, ಸರ್ಜಿಕಲ್ ದಾಳಿ ನಡೆಸಲು ವಾಯುಸೇನೆ ಸಮರ್ಥವಾಗಿದೆ. ನಾವು ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧವಾಗಿದ್ದೇವೆ ಎಂದು ಧಾನೋವಾ ಹೇಳಿದ್ದಾರೆ.
ಪದೇ ಪದೇ ಗಡಿ ವಿಚಾರದಲ್ಲಿ ಖ್ಯಾತೆ ತೆಗೆಯುವ ಚೀನಾ, ಹಾಗೂ ಪಾಕಿಸ್ತಾನ ಒಂದು ಬೆದರಿಕೆಯೊಡ್ಡಿದರೆ ಉಭಯ ದೇಶಗಳೊಂದಿಗೆ ದ್ವಿಮುಖ ಯುದ್ಧ ಮಾಡಲು ನಾವು ತಯಾರಿದ್ದೇವೆ ಎಂದು ಹೇಳಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response