Wednesday, January 22, 2025
ಕ್ರೈಮ್ರಾಷ್ಟ್ರೀಯಸುದ್ದಿ

ಅಕ್ರಮ ಸಂಬಂಧದ ಹೆಸರಿನಲ್ಲಿ ಹಣ ಕೊಡುವಂತೆ ಪೀಡಿಸಿದ ಪೋರ್ನ್​ ಸ್ಟಾರ್ ; ಮನನೊಂದು ಹೆಂಡತಿ-ತಾಯಿಯೊಂದಿಗೆ ವಿಷ ಸೇವಿಸಿದ ಸಂತ್ರಸ್ತ ಆಶಿ ಖಾನ್..! – ಕಹಳೆ ನ್ಯೂಸ್

ಮಧ್ಯಪ್ರದೇಶ: ಪೋರ್ನ್ ಸ್ಟಾರ್ ರಿಮ್ಜಿಮ್ ದಾಸ್ ಎಂಬಾಕೆ ಅಕ್ರಮ ಸಂಬಂಧದ ಹೆಸರಿನಲ್ಲಿ ಉಜ್ಜಯಿನಿ ಜಿಲ್ಲೆಯ ನಿವಾಸಿ ಆಶಿ ಖಾನ್ ಎಂಬಾತನಿಗೆ ಬೆದರಿಕೆ ಹಾಕಿ ಹಣ ನೀಡುವಂತೆ ಒತ್ತಾಯಿಸಿದ್ದಾಳೆ. ಅಸ್ಸಾಂ ಮೂಲದವಳಾದ ರಿಮ್ಜಿಮ್ ದಾಸ್ ಮುಂಬೈನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಪೋರ್ನ್​ ಸ್ಟಾರ್​​ನ ನಿರಂತರ ಬೆದರಿಕೆಯಿಂದ ಆಶಿ ಖಾನ್ ತನ್ನ ಕುಟುಂಬಸ್ಥರೊಂದಿಗೆ ವಿಷ ಸೇವಿಸಿದ್ದಾನೆ.

ಆಶಿ ಖಾನ್ ತನ್ನ ತಾಯಿ ಹಾಗೂ ಪತ್ನಿಯೊಂದಿಗೆ ವಿಷ ಸೇವಿಸಿದ್ದಾನೆ. ಸದ್ಯ ಮೂವರ ಸ್ಥಿತಿಯೂ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈನಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದಾಗ ಆಶಿ ಖಾನ್​ಗೆ ಪೋರ್ನ್​ ಸ್ಟಾರ್ ರಿಮ್ಜಿಮ್ ದಾಸ್ ಪರಿಚಯವಾಗಿತ್ತು ಎನ್ನಲಾಗಿದೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆಶಿ ಖಾನ್ ಕುಟುಂಬ ವಿಡಿಯೋ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ‘ನನ್ನ ಹೆಸರು ಆಶಿ ಖಾನ್. ಉಜ್ಜಯಿನಿಯ ಲೋಹೆ ಪುಲ್ ನಿವಾಸಿ. ವಿಡಿಯೋದಲ್ಲಿ ನನ್ನ ಜತೆಗೆ ಇರುವವರು ತಾಯಿ ಮತ್ತು ಪತ್ನಿ. ಮುಂಬೈನ ರಿಮ್ಜಿಮ್ ದಾಸ್ ಎಂಬ ಪೋರ್ನ್ ಸ್ಟಾರ್ ನನಗೆ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾಳೆ. ಕೇಳಿದಷ್ಟು ಹಣ ನೀಡದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. ಈ ಹಿಂದೆ ನನ್ನ ಮದುವೆಯ ಸಂದರ್ಭದಲ್ಲಿ ಹಣ ನೀಡಿದ್ದೆ. ಇದೀಗ ಮತ್ತೆ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದಾಳೆ’ ಎಂದು ಆಶಿ ಖಾನ್ ಹೇಳಿಕೊಂಡಿದ್ದಾನೆ.

ಮುಂಬೈನಲ್ಲಿದ್ದಾಗ ಅತ್ಯಾಚಾರದ ಪ್ರಕರಣದಲ್ಲಿ ನನ್ನನ್ನು ಜೈಲಿಗೆ ಕಳುಹಿಸಿದ್ದಳು. ಈಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿರುಕುಳ ನೀಡುತ್ತಿದ್ದಾಳೆ. ಆಕೆಗೆ ಹಣ ಕೊಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಡಿಯೋದಲ್ಲಿ ಆಶಿ ಖಾನ್ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)