Wednesday, January 22, 2025
ಸುದ್ದಿ

ಹಾಲು ಖರೀದಿ ಮಾಡೊ ನೆಪದಲ್ಲಿ ಅಂಗಡಿ ಮಾಲೀಕನ ಸ್ಕೂಟರ್‌ನಲ್ಲಿಟ್ಟಿದ್ದ ಹಣಕ್ಕೆ ಕನ್ನ ಹಾಕಿದ ಖದೀಮರು -ಕಹಳೆ ನ್ಯೂಸ್

ಕಾಪು : ಅಂಗಡಿ ಮುಚ್ಚುವ ವೇಳೆ ಹಾಲು ಖರೀದಿ ಮಾಡುವ ನೆಪದಲ್ಲಿ ಅಂಗಡಿ ಮಾಲೀಕನ ಸ್ಕೂಟಿಯಿಂದ 6 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಗುರುವಾರ ರಾತ್ರಿ ಉಡುಪಿಯ ಕಾಪುವಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಪು ಮಹಾಲಸಾ ಸ್ಟೋರ್ ಮಾಲಕ ರಾಘವೇಂದ್ರ ಕಿಣಿ ಹಣ ಕಳೆದುಕೊಂಡಿದ್ದು ಕಾಪು ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ್ದಾರೆ.

ಕಾಪು ಪೇಟೆಯಲ್ಲಿ ಹಾರ್ಡ್ವೇರ್, ಹಾಲಿನ ವ್ಯಾಪಾರ ಸಹಿತ ಉದ್ಯಮವನ್ನು ಹೊಂದಿರುವ ರಾಘವೇಂದ್ರ ಕಿಣಿ ಗುರುವಾರ ರಾತ್ರಿ ಮಳಿಗೆಗೆ ಬೀಗ ಹಾಕುವ ವೇಳೆ ಘಟನೆ ಸಂಭವಿಸಿದೆ.

ಮನೆಗೆ ತೆರಳುವ ಮುನ್ನ 3-4 ದಿನದ ವ್ಯವಹಾರದ ಸುಮಾರು 6 ಲಕ್ಷ ರೂ. ನಗದನ್ನು ಸ್ಕೂಟಿಯಲ್ಲಿ ಇರಿಸಿ, ಅಂಗಡಿಗೆ ಬೀಗ ಹಾಕಲು ತೆರಳಿದ್ದ ವೇಳೆ ಕರಾಮತ್ತು ತೋರಿದ ಕಳ್ಳರು ಸ್ಕೂಟಿ ಪಂಕ್ಚರ್ ಮಾಡಿ ನಗದು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಬೆರಳಚ್ಚು, ಶ್ವಾನದಳ ಸಹಿತ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.