Friday, November 22, 2024
ಸುದ್ದಿ

ತಲೆಸಿಮಿಯ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕ ಪವನ್ ಕುಮಾರ್ ನೆರವಿಗೆ ನಿಂತ ‘ಸಹಾಯಹಸ್ತ ಲೋಕ ಸೇವಾ ಟ್ರಸ್ಟ್(ರಿ)ಕರ್ನಾಟಕ, ನೊಂದವರ ಪಾಲಿಗೆ ಆಸರೆ ಪುತ್ತೂರು’ – ಕಹಳೆ ನ್ಯೂಸ್

ಕುಂದಾಪುರ ತಾಲ್ಲೂಕಿನ ಕಟ್ಬೆಲ್ತುರು ಗ್ರಾಮದ ಗುರುಚರಣ್ ಶ್ಯಾಮಲಾ ದಂಪತಿಗಳ ಪುತ್ರ ಪವನ್ ಕುಮಾರ್(೪) ತಲೆಸಿಮಿಯ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮಗುವಿನ ಚಿಕಿತ್ಸೆಗೆ ೪೦ ಲಕ್ಷ ರೂಪಾಯಿ ಅಗತ್ಯತೆವಿದೆ ಎಂದು ವೈದ್ಯರು ತಿಳಿಸಿದ್ದು, ಬಡ ಕುಟುಂಬ ಅಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಾಗದೇ ಕಣ್ಣೀರು ಹಾಕುತ್ತಿದೆ. ಇದೀಗ ಬಡಕುಟುಂಬಕ್ಕೆ ಆಸರೆಯಾಗಿ ಮಗುವಿನ ಚಿಕಿತ್ಸಗೆ ‘ಸಹಾಯಹಸ್ತ ಲೋಕ ಸೇವಾ ಟ್ರಸ್ಟ್(ರಿ)ಕರ್ನಾಟಕ, ನೊಂದವರ ಪಾಲಿಗೆ ಆಸರೆ ಪುತ್ತೂರು’ ತಂಡ ನೆರವನ್ನ ನೀಡಲು ಸಜ್ಜಾಗಿದೆ. ಮಲ್ಪೆ ವಡಬಾಂಡೇಶ್ವರ ತೀರ್ಥದ ಸಂದರ್ಭದಲ್ಲಿ ಭವತಿ ಭೀಕ್ಷಾದೇಹಿ ಕಾರ್ಯಕ್ರಮದಲ್ಲಿ ‘ಸಹಾಯಹಸ್ತ ಲೋಕ ಸೇವಾ ಟ್ರಸ್ಟ್(ರಿ)ಕರ್ನಾಟಕ, ನೊಂದವರ ಪಾಲಿಗೆ ಆಸರೆ ಪುತ್ತೂರು’ ತಂಡ ದಾನಿಗಳಿಂದ ಧನ ಸಂಗ್ರಹ ನಡೆಸುತ್ತಿದ್ದಾರೆ. ಸಹಾಯ ಹಸ್ತಚಾಚಿ ದಾನಿಗಳು ನೀಡಿದ ಒಟ್ಟು ಹಣವನ್ನ ತಲೆಸಿಮಿಯ ಖಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕ ಪವನ್ ಕುಮಾರ್ ಚಿಕಿತ್ಸೆಗೆ ನೀಡಲಿದ್ದಾರೆ. ಈ ಮೂಲಕ ‘ಸಹಾಯಹಸ್ತ ಲೋಕ ಸೇವಾ ಟ್ರಸ್ಟ್(ರಿ)ಕರ್ನಾಟಕ, ನೊಂದವರ ಪಾಲಿಗೆ ಆಸರೆ ಪುತ್ತೂರು’ ತಂಡ ನೆರವು ನೀಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು