Wednesday, January 22, 2025
ಕ್ರೈಮ್ರಾಜಕೀಯರಾಜ್ಯಸುದ್ದಿ

ಕೊಪ್ಪಳದಲ್ಲಿ ಲವ್ ಜಿಹಾದ್ ; ನಾಲ್ಕು ವರ್ಷಗಳ ಹಿಂದೆ ಇನ್ಸ್​​ಟಾಗ್ರಾಂನಲ್ಲಿ ಪರಿಚಯವಾದ ಹೈದರಾಬಾದ್ ನ ಜಿಹಾದಿ ಮುಸ್ಲಿಂ ಯುವಕ ಶೇಕ್ ವಹಿದ್ ನನ್ನು ವಿವಾಹವಾದ ಹಿಂದು ಯುವತಿ ಇಸ್ಲಾಂಗೆ ಮತಾಂತರ..! ಬಲವಂತದ ಮತಾಂತರದ ಕುರಿತು ಪೊಲೀಸರು ತನಿಖೆ – ಕಹಳೆ ನ್ಯೂಸ್

ಕೊಪ್ಪಳ: ಹೈದರಾಬಾದ್ ಮೂಲದ ಶೇಕ್ ವಹಿದ್ ಎಂಬಾತ ಇನ್ಸ್​​ಟಾಗ್ರಾಂ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಇಂದಿರಾನಗರದ ಹಿಂದೂ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಆಕೆಯೊಂದಿಗೆ ವಿವಾಹವಾಗಿದ್ದಾನೆ. ಈ ಘಟನೆ ಇದೀಗ ಲವ್ ಜಿಹಾದ್ ಸ್ವರೂಪ ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ನಾಲ್ಕು ವರ್ಷಗಳ ಹಿಂದೆ ಮುಸ್ಲಿಂ ಯುವಕ ಶೇಕ್ ವಹಿದ್​ಗೆ ಇನ್ಸ್​​ಟಾಗ್ರಾಂನಲ್ಲಿ ಕೊಪ್ಪಳದ ಯುವತಿಯ ಪರಿಚಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಇವರಿಬ್ಬರ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿದೆ. ನಂತರ ಮನೆ ಬಿಟ್ಟು ಹೋಗಿ ಮುಸ್ಲಿಂ ಸಂಪ್ರದಾಯದಂತೆ ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆ.

ಇವರಿಬ್ಬರು ಮನೆಬಿಟ್ಟು ಹೋಗಿ ವಿವಾಹವಾಗುತ್ತಿದ್ದಂತೆ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಕುಷ್ಟಗಿ ಪಟ್ಟಣದಲ್ಲಿ ಲವ್ ಜಿಹಾದ್ ನಡೆದಿದೆ ಎನ್ನಲಾಗಿದೆ. ಆರೋಪ ಕೇಳಿ ಬಂದ ಕೂಡಲೇ ಎಚ್ಚೆತ್ತ ಪೊಲೀಸರು ವಿವಾಹವಾಗಿರುವ ಜೋಡಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಬಲವಂತದ ಮತಾಂತರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ತನಿಖೆಯ ವೇಳೆ ಮನಃಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.