Sunday, February 2, 2025
ಸುದ್ದಿ

ಸೀರಿಯಲ್ ಸೆಟ್‌ನಲ್ಲೇ ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ : ಸಹನಟ ಶಿಜಾನ್‌ ಖಾನ್ ಬಂಧನ – ಕಹಳೆ ನ್ಯೂಸ್

ಪಾಲ್ಘರ್‌, ಮಹಾರಾಷ್ಟ್ರ: ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಹನಟ ಶಿಜಾನ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣಕ್ಕೆ ಸಂಬಂಧಿಸಿ ತುನಿಷಾ ಅವರ ತಾಯಿ ದೂರು ನೀಡಿದ್ದರು. ದೂರಿನ ಅನ್ವಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಜಾನ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಪಿ ಚಂದ್ರಕಾಂತ ಜಾಧವ್ ತಿಳಿಸಿದ್ದಾರೆ.

ಪಾಲ್ಘರ್‌ ಜಿಲ್ಲೆಯ ವಸಾಯಿ ಪ್ರದೇಶದಲ್ಲಿ ಹಾಕಲಾಗಿದ್ದ ಧಾರಾವಾಹಿವೊಂದರ ಶೂಟಿಂಗ್‌ ಸೆಟ್‌ನಲ್ಲೇ 21 ವರ್ಷದ ತುನಿಷಾ ಶರ್ಮಾ ಅವರ ಮೃತದೇಹ ಶನಿವಾರ ಪತ್ತೆಯಾಗಿತ್ತು.

‘ಸೆಟ್‌ನ ಶೌಚಾಲಯಕ್ಕೆ ಹೋದ ಶರ್ಮಾ ಅವರು ತುಂಬಾ ಹೊತ್ತಾದರೂ ಹೊರಬರಲಿಲ್ಲ. ಶೌಚಾಲಯದ ಬಾಗಿಲನ್ನು ಮುರಿಯಲಾಯಿತು. ಈ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಶರ್ಮಾ ಶವ ಕಂಡುಬಂದಿತ್ತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.