Wednesday, January 22, 2025
ರಾಷ್ಟ್ರೀಯಸುದ್ದಿ

ಮಥುರಾ ಶ್ರೀಕೃಷ್ಣ ಜನ್ಮಸ್ಥಾನ ದೇಗುಲದ ಜಾಗವನ್ನು ಅತಿಕ್ರಮಿಸಿಕೊಂಡು ಮಸೀದಿ ನಿರ್ಮಾಣ ಮಾಡಿದ್ದ ಶಾಹಿ ಈದ್ಗಾ ಮಸೀದಿಯೊಳಗೆ ಸರ್ವೆಗೆ ಕೋರ್ಟ್ ಆದೇಶ ; ಜ.2ರಂದು ಸಮೀಕ್ಷೆ ಆರಂಭ – ಕಹಳೆ ನ್ಯೂಸ್

ನವದೆಹಲಿ: ಹಿಂದುಗಳ ಶ್ರದ್ಧಾ ಕೇಂದ್ರ ಉತ್ತರ ಪ್ರದೇಶದ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ದೇಗುಲದ ಜಾಗವನ್ನು ಒತ್ತುವರಿ ಮಾಡಿ ನಿರ್ವಿುಸಲಾಗಿದೆ ಎನ್ನಲಾದ ಶಾಹಿ ಈದ್ಗಾ ಮಸೀದಿಯೊಳಗೆ ಸಮೀಕ್ಷೆ ನಡೆಸಲು ಮಥುರಾ ಸ್ಥಳೀಯ ನ್ಯಾಯಾಲಯ ಶನಿವಾರ ಮಹತ್ವದ ಆದೇಶ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಅಲ್ಲಿನ ಸ್ಥಳೀಯ ಕೋರ್ಟ್ ಆದೇಶ ನೀಡಿದ್ದ ಕೆಲ ತಿಂಗಳುಗಳ ಬಳಿಕ ಮಥುರಾ ನ್ಯಾಯಾಲಯದಿಂದ ಈ ಆದೇಶ ಬಂದಿದೆ.

ಶ್ರೀಕೃಷ್ಣ ಜನ್ಮಸ್ಥಾನದ ಜಮೀನನ್ನು ಮೊಘಲ್ ಅರಸ ಔರಂಗಜೇಬ್ ಅತಿಕ್ರಮಿಸಿಕೊಂಡು ಮಸೀದಿ ನಿರ್ಮಾಣ ಮಾಡಿದ್ದ. ಹೀಗಾಗಿ ಈ ಸ್ಥಳವನ್ನು ಹಿಂದುಗಳಿಗೆ ಬಿಟ್ಟುಕೊಟ್ಟು ಮಸೀದಿಗೆ ಮತ್ತೊಂದು ಪ್ರತ್ಯೇಕ ಜಾಗ ಒದಗಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿಬಂದಿದೆ. ಈಗ ನ್ಯಾಯಾಲಯ ಸರ್ವೆ ನಡೆಸಲು ಸೂಚನೆ ನೀಡಿರುವುದು ಹಿಂದುಗಳ ಪ್ರತಿಪಾದನೆಗೆ ಸಿಕ್ಕ ಕಾನೂನಾತ್ಮಕ ಮುನ್ನಡೆ ಎಂದೇ ವಿಶ್ಲೇಷಿಸಲಾಗಿದೆ.

ಜ್ಞಾನವಾಪಿ ಮಸೀದಿಯಲ್ಲಿ ನಡೆಸಿರುವ ಮಾದರಿಯಲ್ಲೇ ಜನವರಿ 2ರಂದು ಶಾಹಿ ಈದ್ಗಾ ಮಸೀದಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಲಾಗಿದ್ದು, ಜ.20ರ ಬಳಿಕ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ತಿಳಿಸಿದ್ದಾರೆ. ಹಿಂದುಸೇನಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ವಿಷ್ಣುಗುಪ್ತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಈ ಆದೇಶ ನೀಡಿದೆ. ಜ.20ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. ಶ್ರೀಕೃಷ್ಣನ ಜನ್ಮದಿಂದ ಮಂದಿರ ನಿರ್ವಣದವರೆಗಿನ ಸಂಪೂರ್ಣ ಇತಿಹಾಸವನ್ನು ನ್ಯಾಯಾಲಯಕ್ಕೆ ವಿವರಿಸಲಾಗಿದೆ. 1968ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ನಡುವೆ ಮಾಡಿಕೊಂಡಿರುವ ಒಪ್ಪಂದ ಕಾನೂನುಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸುವಂತೆ ಕೂಡ ಒತ್ತಾಯಿಸಲಾಗಿದೆ ಎಂದು ವಿಷ್ಣು ಗುಪ್ತಾ ಅವರ ವಕೀಲ ಶೈಲೇಶ್ ದುಬೆ ಹೇಳಿದ್ದಾರೆ.

ಹಲವು ಅರ್ಜಿ: ವಿಷ್ಣು ಗುಪ್ತಾ ಅಲ್ಲದೆ ಮಸೀದಿ ತೆರವಿಗೆ ಹಲವರು ಅರ್ಜಿ ಸಲ್ಲಿಸಿದ್ದಾರೆ. 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯಲ್ಲಿ ನಿರ್ವಿುಸಲಾಗಿದೆ ಎಂದು ಲಖನೌ ನಿವಾಸಿ ರಂಜನಾ ಅಗ್ನಿಹೋತ್ರಿ ಅರ್ಜಿ ಸಲ್ಲಿಸಿ, ಮಥುರಾದ ಕೇಶವ್ ದೇವ ದೇವಸ್ಥಾನದ ಬಾಲ ಭಗವಾನ್ ಕೃಷ್ಣನ ಸ್ನೇಹಿತ ಎಂದು ಹೇಳಿಕೊಂಡಿದ್ದರು. ಶ್ರೀಕೃಷ್ಣನ ಆರಾಧಕರಾದ ನಮಗೆ ಅವರ ಆಸ್ತಿಯನ್ನು ಮರು ಸ್ಥಾಪಿಸುವಂತೆ ಕೋರಿ ಮೊಕದ್ದಮೆ ಹೂಡುವ ಹಕ್ಕಿದೆ. ಜನ್ಮಭೂಮಿಯ ಮೇಲೆ ಮಸೀದಿ ನಿರ್ವಿುಸಿರುವುದು ತಪ್ಪು. ಆಸ್ತಿ ಹಂಚಿಕೆ ವಿಚಾರದಲ್ಲಿ ಹಲವು ವರ್ಷಗಳ ಹಿಂದೆಯೇ ರಾಜಿ ಮಾಡಿಕೊಳ್ಳಲಾಗಿತ್ತು, ಆದರೆ ಆ ರಾಜಿಯು ಕಾನೂನುಬಾಹಿರವಾಗಿದೆ ಎಂದು ವಾದಿಸಿದ್ದರು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿವಾದಿತ ಸ್ಥಳದ ಉತ್ಖನನ ನಡೆಸಬೇಕು ಮತ್ತು ಉತ್ಖನನದ ತನಿಖಾ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಮಥುರಾದ ಸಿವಿಲ್ ನ್ಯಾಯಾಲಯವು 1991ರ ಆರಾಧನಾ ಸ್ಥಳಗಳ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಈ ಹಿಂದೆ ವಜಾಗೊಳಿಸಿತ್ತು. ಮಥುರಾದ ಸೆಷನ್ಸ್ ನ್ಯಾಯಾಲಯದಲ್ಲಿ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಮೇ 6 ರಂದು ಕೊನೆಗೊಂಡಿತ್ತು. ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಕಳೆದ ವರ್ಷ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ಜನ್ಮಸ್ಥಾನದ ಮೇಲೆ ಹಕ್ಕನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್ ವಕ್ಪ ಬೋರ್ಡ್, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ವರ್ಗಾಯಿಸಿದ್ದಕ್ಕೆ ತಕರಾರು: ಶ್ರೀಕೃಷ್ಣ ಜನ್ಮಭೂಮಿಯ ಜಮೀನನ್ನು ಒಪ್ಪಂದದ ಮೂಲಕ ಮಸೀದಿಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸಲ್ಲಿಸಲಾದ ಅರ್ಜಿ ಬಾಕಿ ಉಳಿದಿದೆ. ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್​ನ ಆಸ್ತಿಯನ್ನು ಹಿಂದೂಗಳಿಗೆ ವಂಚಿಸಿ ಶಾಹಿ ಈದ್ಗಾದೊಂದಿಗೆ ಅನಧಿಕೃತವಾಗಿ ರಾಜಿ ಮಾಡಿಕೊಳ್ಳುವ ಮೂಲಕ ನೀಡಿರುವುದು ತಪ್ಪು. 1968ರ ಆ. 12 ಶಾಹಿ ಈದ್ಗಾದೊಂದಿಗೆ ಶ್ರೀಕೃಷ್ಣ ಜನ್ಮ ಸೇವಾ ಸಂಸ್ಥಾನವು ಮಾಡಿಕೊಂಡಿರುವ ಒಪ್ಪಂದ ಕಾನೂನಿನ ವ್ಯಾಪ್ತಿಯಿಲ್ಲದೆ ಸಹಿ ಮಾಡಿರುವ ಒಪ್ಪಂದ ಎಂದು ನ್ಯಾಯಾಲಯ ಘೊಷಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಠಾಕೂರ್ ಕೇಶವದೇವ ಮಹಾರಾಜ್ ಕತ್ರಾಗೆ ಸೇರಿದ 13.37 ಎಕರೆ ಜಾಗದಲ್ಲಿ ಶಾಹಿ ಈದ್ಗಾ ನಿರ್ವಣಗೊಂಡಿದೆ. ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿಯ ನಡುವಿನ ಒಪ್ಪಂದವೇ ಅಕ್ರಮ. ಏಕೆಂದರೆ, ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನಕ್ಕೆ ಈ ಜಮೀನಿನ ಮೇಲೆ ಯಾವುದೇ ಶಾಸನಬದ್ಧ ಹಕ್ಕಿಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ತಕರಾರು ಏನು?: ಶ್ರೀಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ಜನ್ಮಭೂಮಿಯ 13.37 ಎಕರೆ ಜಾಗದಲ್ಲಿ ದೇವಸ್ಥಾನದ ಒಂದು ಭಾಗ ಕೆಡವಿ ನಿರ್ವಿುಸಲಾಗಿದೆ. ಈ ಮಸೀದಿ ತೆರವು ಮಾಡಿ ಮಂದಿರ ನಿರ್ವಣಕ್ಕೆ ಭೂಮಿ ವಾಪಸ್ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಈ ಹಿಂದೆ ಮೇ 12ರಂದು ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠವು ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಮಥುರಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

ಆಗ್ರಾದಲ್ಲಿ ಪ್ರಧಾನ ದೇವರು?: ಠಾಕೂರ್ ಕೇಶವದೇವ ದೇವಸ್ಥಾನದ ಪ್ರಧಾನ ದೇವರನ್ನು ಉತ್ತರ ಪ್ರದೇಶ ಆಗ್ರಾದ ಬೇಗಂ ಸಾಹಿಬಾ ಮಸೀದಿಯ ಮೆಟ್ಟಿಲುಗಳ ಕೆಳಗೆ ಸಮಾಧಿ ಮಾಡಲಾಗಿದೆ ಎಂದು ಮಥುರಾ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಧಾನ ದೇವರನ್ನು ಮರಳಿ ತರಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ, ಭಾರತೀಯ ಪುರಾತತ್ವ ಸರ್ವೆಕ್ಷಣೆಯ ಮಹಾನಿರ್ದೇಶಕರು, ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕರು, ಭಾರತೀಯ ಪುರಾತತ್ವ ಸರ್ವೆಕ್ಷಣೆಯ ನಿರ್ದೇಶಕರು ಪ್ರತಿವಾದಿಗಳನ್ನಾಗಿ ಮಾಡಲು ಕೇಳಿಕೊಂಡಿದ್ದೇವೆ ಎಂದು ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.