Saturday, September 21, 2024
ಸುದ್ದಿ

ಆಟಿ ಅಮಾವಾಸ್ಯೆಗೆ ಪಾಲೆ ಮರದ ಕಷಾಯ ಕುಡಿದ್ರಾ? – ಕಹಳೆ ನ್ಯೂಸ್

ಆಷಾಢ ಮಾಸ ಕಳೆದಿದೆ, ತುಳುನಾಡಿನ ಜನರು ಆಟಿ ಅಮಾವಾಸ್ಯೆಯನ್ನು ವಿಶೇಷವಾಗಿ ಹಾಲೆ ಮರದ ಕಷಾಯ ಕುಡಿಯುವ ಮೂಲಕ ಆಚರಿಸಿದ್ದಾರೆ. ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಮಂಗಳೂರಿನಲ್ಲಿ ಎರಡು ಕಡೆ ಉಚಿತವಾಗಿ ಜನರಿಗೆ ಕಷಾಯವನ್ನು ವಿತರಣೆ ಮಾಡಲಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವೆಯನ್ನು ಮಾಡಲಾಗುತ್ತಿದೆ.

ಆಷಾಢ ಅಮಾವಾಸ್ಯೆಯ ದಿನವನ್ನು ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯೇ ಘಟ್ಟದ ಮೇಲಿನ ಪ್ರದೇಶದಲ್ಲಿ ಭೀಮನ ಅಮಾವಾಸ್ಯೆಯಾಗಿದೆ. ಕರಾವಳಿ ಭಾಗದ ಜನರು ಆಟಿ ಅಮಾವಾಸ್ಯೆಯಂದು, ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ ಅಥವ ಹಾಲೆ ಮರದ ಕಷಾಯ ಕುಡಿಯುವುದು ಸಂಪ್ರದಾಯ. ಇದಕ್ಕೆ ಆತಿ ಕಷಾಯ ಎಂದು ಕರೆಯುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಹಾಲೆ ಮರದ ತೊಗಟೆಯನ್ನು ತೆಗೆದು ಅದನ್ನು ಜಜ್ಜಿ ಕಷಾಯ ತಯಾರಿಸಲಾಗುತ್ತದೆ. ಕಹಿಯಾದ ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಜನರ ನಂಬಿಕೆ. ವೈದ್ಯರು ಸಹ ಇದನ್ನು ಒಪ್ಪುತ್ತಾರೆ. ಮಂಗಳೂರಿನ ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಈ ಬಾರಿ ಎರಡು ಶಿಬಿರಗಳನ್ನು ನಡೆಸಿ ಹಾಲೆ ಮರದ ಕಷಾಯವನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.

ಆಟಿ ಅಮಾವಾಸ್ಯೆ ಆಚರಣೆ :

ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯನ್ನು ಆಚರಣೆ ಮಾಡಲಾಗಿದೆ. ಕಹಿಯಾದ ಕಷಾಯ ಕುಡಿದು ಜನರು ತಮ್ಮ ಹಿಂದಿನ ಸಂಪ್ರದಾಯವನ್ನು ಇಂದಿಗೂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಘಟ್ಟದ ಮೇಲಿನ ಪ್ರದೇಶದಲ್ಲಿ ಈ ಆಟಿ ಅಮಾವಾಸ್ಯೆ ಅಮಾವಾಸ್ಯೆ ಭೀಮನ ಅಮಾವಾಸ್ಯೆ ಎಂದು ಪ್ರಸಿದ್ಧವಾಗಿದೆ.

ಹಾಲೆ ಮರದ ವೈಶಿಷ್ಟ್ಯತೆ : ಹಾಲೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ರಿಂದ 9 ಪತ್ರಗಳಿರುತ್ತವೆ. ಎಲೆಗಳ ಅಗಲ ಒಂದರಿಂದ ಎರಡು ಇಂಚು ಇದ್ದು, ಉದ್ದ 6 ರಿಂದ 12ಇಂಚು ಇರುತ್ತದೆ. ಕಡು ಹಸಿರು ವರ್ಣದಿಂದ ಕೂಡಿದ್ದು ಮುರಿದಾಗ ಹಾಲು ಹೊರಸೂಸುತ್ತದೆ.
ಹಾಲೆ ಮರದ ತೊಗಟೆ ಬೂದು ವರ್ಣದಿಂದ ಕೂಡಿದ್ದು, ದೊರಗಾಗಿದ್ದು ಕಲ್ಲಿನಿಂದ ಜಜ್ಜಿ ಹಾಳೆಗಳಂತೆ ತೆಗೆಯಲು ಬರುವುದು. ಈ ಕಷಾಯವನ್ನು ಕುಡಿಯುವುದರಿಂದ ಶೀತ ವಾತಾವಾರಣವನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ ಹುಳ ಬಾಧೆಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ.