ಸಂತ ಫಿಲೋಮಿನಾ ಕಾಲೇಜಿನ ವತಿಯಿಂದ ಕೆದಂಬಾಡಿ ಗ್ರಾಮ ದತ್ತು ಸ್ವೀಕಾರದ ಬಳಿಕ ಪ್ರಥಮ ಕಾರ್ಯಕ್ರಮಕ್ಕೆ ಚಾಲನೆ- ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕೆದಂಬಾಡಿ ಗ್ರಾಮ ಪಂಚಾಯತ್ ನ ಒಪ್ಪಂದದ ಮೇರೆಗೆ ಕೆಲವು ದಿನಗಳ ಹಿಂದೆ ಕೆದಂಬಾಡಿ ಗ್ರಾಮದ ದತ್ತು ಸ್ವೀಕಾರ ನಡೆದಿತ್ತು. ದತ್ತು ಸ್ವೀಕಾರದ ಬಳಿಕ ಪ್ರಥಮ ಕಾರ್ಯಕ್ರಮವಾಗಿ ರಸ್ತೆ ದುರಸ್ತಿ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. “ಸ್ವಚ್ಛ ರಸ್ತೆಗಳು ಯಾವಾಗಲೂ ಸುರಕ್ಷಿತ ರಸ್ತೆಗಳಾಗಿರುತ್ತವೆ. ಈ ನಿಟ್ಟಿನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ನಮ್ಮೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಚಾರ” ಎಂದು ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ರತನ್ ರೈ
ಹೇಳಿದರು.
ಈ ಕಾರ್ಯಗ್ರಮದಲ್ಲಿ ಸಾರೆಣಿಯಿಂದ ಸನ್ಯಾಸಿಗುಡ್ಡೆಯ ಸರಕಾರಿ ಶಾಲೆಯವರೆಗೆ ರಸ್ತೆ ಸ್ವಚ್ಛತೆ, ರಸ್ತೆ ದುರಸ್ತಿ ಮತ್ತು ರಸ್ತೆಯ ಇಕ್ಕೆಲಗಳಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ಇದಲ್ಲದೆ ರಸ್ತೆಯಲ್ಲಿರುವ ಹೊಂಡಗಳಿಗೆ ಮಣ್ಣು ಹಾಕಿ ದುರಸ್ತಿಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸನ್ಯಾಸಿಗಡ್ಡೆ ಶ್ರೀರಾಮ ಮಂದಿರದ ಅಧ್ಯಕ್ಚ ಶ್ರೀ ಜಯಶಂಕರ ರೈ ಬೆದ್ರುಮಾರು, ಪಂಚಾಯತ್ ಕಾರ್ಯದರ್ಶಿ ಶ್ರೀ ಸಂತೋಷ್ ರೈ ಕೊರಂಗ, ಕೆದಂಬಾಡಿ ಗ್ರಾಮ ಪಂಚಾಯ್ ಸದಸ್ಯರು, ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ವಾಸುದೇವ ಉಪಸ್ಥಿತರಿದ್ದರು. ಕೆದಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಕೆ ಸ್ವಾಗತಿಸಿ ಕಾರ್ಯದರ್ಶಿ ಸುನಂದ ರೈ ವಂದಿಸಿದರು. ಕಾಲೇಜಿನ ೬೦ ಎನ್ ಎಸ್ ಎಸ್
ಸ್ವಯಂಸೇವಕರು ಮತ್ತು ಗ್ರಾಮನಿವಾಸಿಗಳು ಭಾಗವಹಿಸಿದರು.