Wednesday, January 22, 2025
ಸುದ್ದಿ

ಸಂತ ಫಿಲೋಮಿನಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಕೆದಂಬಾಡಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ದತ್ತು ಗ್ರಾಮವಾದ ಕೆದಂಬಾಡಿಯಲ್ಲಿ ಸ್ವಚ್ಛ ಕೆದಂಬಾಡಿ ಕಾರ್ಯಕ್ರಮ ನಡೆಯಿತು. ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕಡಮಜಲು ಸುಭಾಷ್‌ ರೈ ರವರು ಇತ್ತೀಚೆಗೆ ಪ್ಲಾಸ್ಟಿಕ್‌ ಬಳಕೆಯು ಅತಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ಲಾಸ್ಟಿಕ್‌ ಮಣ್ಣಿನಲ್ಲಿ ಬೆರೆಯುವುದಿಲ್ಲ. ಇದರ ಸಮರ್ಪಕ ನಿರ್ವಹಣೆ ನಮ್ಮೆಲ್ಲರ ಕರ್ತವ್ಯ. ಪ್ಲಾಸ್ಟಿಕ್‌ ಬಳಕೆ ಅನಿವಾರ್ಯ ಆದರೆ ನಾವು ಪುನರ್ಬಳಕೆ, ಕಡಿಮೆ ಬಳಕೆ ಮುಂತಾದ ತತ್ವಗಳನ್ನನುಸರಿಸಿದರೆ ಉತ್ತಮ. ಇದರಿಂದ ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆದಂಬಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶ್ರೀ ರತನ್‌ ರೈ ಕುಂಬ್ರ ಇವರು “ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನದೂ ಆದ್ಯ ಕರ್ತವ್ಯವಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತವೆ.

ಗ್ರಾಮ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳು ಕೈ ಜೋಡಿಸುತ್ತಿರುವುದು ನಮಗೆಲ್ಲ ಸಂತೋಷದ ವಿಚಾರ” ಎಂದು ಹೇಳಿದರು. ಕಾಲೇಜಿನ ಎನ್‌ ಎಸ್‌, ಎಸ್‌ ಅಧಿಕಾರಿ ಪ್ರೊ| ವಾಸುದೇವರವರು ವಿದ್ಯಾರ್ಥಿಗಳಿಗೆ ಪರಿಸರ ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಕುಂಬ್ರದಿಂದ ಸಾರೆಪುಣಿಯ ವರೆಗಿನ ರಸ್ತೆಯ ಇಕ್ಕೆಲಗಳಲ್ಲೂ ಇರುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಕಾಲೇಜಿನ ಎನ್‌ ಎಸ್‌ ಎಸ್‌ ಸ್ವಯಂ ಸೇವಕಿಯಾದ ಪ್ರಿಯಾ ಡಿ ಸೋಜ ಸ್ವಾಗತಿಸಿದರು ಹಾಗೂ ಕೃಷ್ಣ ಕುಮಾರ್‌ ವಂದಿಸಿದರು. ಕಾಲೇಜಿನ ಎನ್‌ ಎಸ್‌ ಎಸ್‌ ಅಧಿಕಾರಿಯಾದ ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.