Wednesday, January 22, 2025
ಕ್ರೈಮ್ರಾಷ್ಟ್ರೀಯಸುದ್ದಿ

ಮತ್ತೊಂದು ಲವ್‌ಜಿಹಾದ್ | ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿ, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಹಿಂದೂ ಹುಡುಗಿ ಉಮಾ ಶರ್ಮಾಳನ್ನು ಕ್ರೂರವಾಗಿ ಥಳಿಸಿ, ವಿದ್ಯುತ್ ಶಾಕ್ ಕೊಟ್ಟು ಬೆಡ್‌ರೂಮಲ್ಲೇ ಹೂತು ಹಾಕಿದ ವಾಸಿ ಅಹ್ಮದ್.! – ಕಹಳೆ ನ್ಯೂಸ್

ಉತ್ತರಪ್ರದೇಶ: ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಹಿಂದೂ ಧರ್ಮದಿಂದ ಮತಾಂತರವಾಗಿದ್ದ ಉಮಾ ಶರ್ಮಾಳನ್ನು ಆಕೆಯ ಪತಿ ವಾಸಿ ಅಹ್ಮದ್ ಕೊಲೆ ಮಾಡಿ, ಮೃತದೇಹವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಮಾ ಶರ್ಮಾ ಹಾಗೂ ವಾಸಿಮ್ ಅಹ್ಮದ್ ಮದುವೆಯಾಗಿ ಏಳು ವರ್ಷಗಳೇ ಕಳೆದಿತ್ತು. ದಂಪತಿಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ನಡುವೆ ಮನಸ್ಥಾಪ ಉಂಟಾಗಿ ಮನೆಯಲ್ಲಿ ದಂಪತಿಗಳು ದಿನವೂ ಜಗಳ ಮಾಡುತ್ತಿದ್ದರು. ಇದೇ ಕೋಪದಲ್ಲಿ ಗಂಡ ವಾಸಿಮ್ ಅಹ್ಮದ್, ಪತ್ನಿ ಉಮಾ ಶರ್ಮಾಳಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ. ನಂತರ ತನ್ನ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶವವನ್ನು ಹೂತು ಹಾಕಿದ್ದಾನೆ.

ಏಳು ವರ್ಷಗಳ ಹಿಂದೆ ಮುಸ್ಲಿಂ ಯುವಕನೊಂದಿಗೆ ವಿವಾಹವಾದ ಉಮಾ ಶರ್ಮಾ, ನಂತರ ತನ್ನ ಹೆಸರನ್ನು ಅಕ್ಸಾ ಫಾತ್ಮಾ ಬೇಗಂ ಎಂದು ಬದಲಾಯಿಸಿಕೊಂಡಿದ್ದಳು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಈ ದಂಪತಿ, ಇತ್ತೀಚೆಗೆ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿತ್ತು. ಇದೀಗ ಉಮಾ ಶರ್ಮಾಳನ್ನು ಕ್ರೂರವಾಗಿ ಥಳಿಸಿದ ವಾಸಿಮ್ ಅಹ್ಮದ್ ನಂತರ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ.

ಘಟನೆಯ ಸಂದರ್ಭದಲ್ಲಿ ವಾಸಿಮ್ ಅಹ್ಮದ್ ತಾಯಿ ಆಶಿಯಾ ಬೇಗಂ ಊರಿನಲ್ಲಿ ಇರಲಿಲ್ಲ. ಘಟನೆ ನಡೆದ ಎರಡು ದಿನಗಳ ನಂತರ ಆಶಿಯಾ ತನ್ನ ಸೊಸೆಯ ಬಗ್ಗೆ ವಿಚಾರಿಸಿದಾಗ ಪತ್ನಿ ಹೊರಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾನೆ. ಇದಾಗಿಯೂ ಸೊಸೆ ಕಾಣದಿದ್ದಾಗ ಅತ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಬಂದು ಮನೆ ಪರಿಶೀಲನೆ ನಡೆಸಿದಾಗ, ನೆಲದಲ್ಲಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ಅನುಮಾನದ ಮೇಲೆ, ನೆಲವನ್ನು ಅಗೆದು ನೋಡಿದಾಗ ಉಮಾ ಶರ್ಮಾಳ ಮೃತದೇಹ ಹೂತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಆರೋಪಿ ವಾಸಿಮ್ ಅಹ್ಮದ್​ನನ್ನು ಬಂಧಿಸಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)