Wednesday, January 22, 2025
ಸುದ್ದಿ

ಒಳ ಉಡುಪಿನಲ್ಲಿ ಒಂದು ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಾಣೆ: ಯುವತಿ ಅರೆಸ್ಟ್‌ – ಕಹಳೆ ನ್ಯೂಸ್

ಯುವತಿಯೊಬ್ಬಳು ತನ್ನ ಒಳ ಉಡುಪಿನಲ್ಲಿ ಒಂದು ಕೋಟಿ ಮೌಲ್ಯದ ಚಿನ್ನವನ್ನಿರಿಸಿ, ಕಳ್ಳಸಾಗಾಣೆ ಮಾಡುತ್ತಿರುವ ಘಟನೆ ಕೇರಳದ ಕರೀಪುರ ವಿಮಾನ ನಿಲ್ದಾಣದ ಬಳಿ ಬೆಳಕಿಗೆ ಬಂದು, ಇದೀಗ ಈಕೆಯನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯುವತಿಯ ಒಳ ಉಡುಪಿನಲ್ಲಿ ಸುಮಾರು 1884 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದಿಷ್ಟೇ ಅಲ್ಲದೆ ವಿಚಾರಣೆ ವೇಳೆ ಯುವತಿಗೆ ಕಣ್ಣೂರು ಮೂಲದ ಕೊಟೇಶನ್ ಗ್ಯಾಂಗ್ ಜೊತೆಗೆ ಸಂಪರ್ಕವಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಆಕೆ ದುಬೈನಿಂದ ಕೇರಳಕ್ಕೆ ಚಿನ್ನವನ್ನು ಕದ್ದು ಸಾಗಿಸುತ್ತಿದ್ದಳು ಎಂದು ತಿಳಿದುಬಂದಿದೆ. ಇನ್ನೂ, ಚಿನ್ನದ ಹಿಂದಿರುವ ವ್ಯಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿಗಳು ತಿಳಿದು ಬರಬೇಕಿದೆ ಎಂದು ಪೋಲೀಸರು ತಿಳಿಸಿದ್ದಾರೆ.