Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪುತ್ತೂರು ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ; ಲಂಪಟ ಜಿಹಾದಿ ತಕಿಯುದ್ದೀನ್ ಅಂದರ್..! – ಕಹಳೆ ನ್ಯೂಸ್

ಪುತ್ತೂರು: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಫೋಕ್ಸೋ ಪ್ರಕರಣದಡಿ ಬಂಧಿಸಿರುವ ಘಟನೆ ಪುತ್ತೂರು ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವು ಮಾಲಡ್ಕ ನಿವಾಸಿಯಾದ ತಕಿಯುದ್ದೀನ್ ಬಂಧಿತ ಆರೋಪಿ. ಈತ ಸಂತ್ರಸ್ತೆ ಬಾಲಕಿಯ ತಂದೆಯ ಸ್ನೇಹಿತನಾಗಿದ್ದ.

ಈತ ಬಾಲಕಿಯ ಮನೆಗೆ ಬಂದು ಹೋಗುತ್ತಿರುವುದಲ್ಲದೆ ಸಲುಗೆಯಿಂದ ಇದ್ದ. ಅಕ್ಟೋಬರ್ ತಿಂಗಳಲ್ಲಿ ಬಾಲಕಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಆತ ಹಿಂಬಾಲಿಸಿಕೊಂಡು ಬಂದು ಪ್ರತ್ಯೇಕವಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ನಿನ್ನನ್ನು ಸ್ಕೂಲ್‌ಗೆ ಬಿಡುತ್ತೇನೆ ಎಂದು ಒತ್ತಾಯ ಮಾಡಿರುವುದಲ್ಲದೆ ಬಾರದೇ ಇದ್ದಲ್ಲಿ ನಿನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಸಿರುತ್ತಾನೆ. ಅ.5ರಂದು ರಾತ್ರಿ 12 ಗಂಟೆಗೆ ತಕಿಯುದ್ದೀನ್ ಸಂತ್ರಸ್ತೆಯ ಮನೆಯ ಬಾಗಿಲು ತಟ್ಟಿದ್ದಾನೆ.

ನ.10ರಂದು ಬೆಳಿಗ್ಗೆ ಆಕೆ ಶಾಲೆಗೆ ಹೋಗಲು ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಆಕೆಯನ್ನು ತಡೆದು ನಿಲ್ಲಿಸಿ ತನ್ನ ಜೊತೆಗೆ ಬೈಕ್‌ನಲ್ಲಿ ಬರುವಂತೆ ಒತ್ತಾಯದಿಂದ ಕರೆದುಕೊಂಡು ಹೋಗಿ ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಡಿ.22ರಂದು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿ ತಕಿಯುದ್ದೀನ್‌ ನನ್ನು ಬಂಧಿಸಿದ್ದಾರೆ.