Recent Posts

Monday, January 20, 2025
ಸುದ್ದಿ

ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಂಗಿಕಾ ಶೆಟ್ಟಿಗೆ “ಕಲೋತ್ಸವ-2022” ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ – ಕಹಳೆ ನ್ಯೂಸ್

ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರಕಾರ ಹಾಗೂ ಎನ್.ಸಿ.ಇ.ಆರ್.ಟಿ ನವದೆಹಲಿ ಯವರು 9 ರಿಂದ 12ನೇ ತರಗತಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ “ಕಲೋತ್ಸವ-2022” ಸ್ಪರ್ಧೆಯಲ್ಲಿ ಕುಮಾರಿ ಆಂಗಿಕಾ ಶೆಟ್ಟಿ ಭಾಗವಹಿಸಿ, ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ವಿದುಷಿ ಸ್ವಸ್ತಿಕಾ.ಆರ್.ಶೆಟ್ಟಿ ಹಾಗೂ ರಾಜಕುಮಾರ್ ಶೆಟ್ಟಿ ದಂಪತಿಗಳ ಪುತ್ರಿ.

ಇವರು ಪುತ್ತೂರಿನ ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಎಂಡ್ ಕಲ್ಚರ್ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕರ್ನಾಟಕ ಕಲಾಶ್ರೀ ಕುದ್ಕಾಡಿ ವಿಶ್ವನಾಥ್ ರೈ ಮತ್ತು ವಿದುಷಿ ನಯನಾ.ವಿ.ರೈ ರವರ ಮೊಮ್ಮಗಳು. ವಿದುಷಿ ಸ್ವಸ್ತಿಕಾ.ಆರ್. ಶೆಟ್ಟಿ ಹಾಗೂ ವಿದುಷಿ ನಯನಾ.ವಿ.ರೈ ಇವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು, ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿರುತ್ತಾಳೆ..