Recent Posts

Monday, January 20, 2025
ಸುದ್ದಿ

ಬೈಕ್ ಓಡಿಸುವುದನ್ನು ಕಲಿಸಲು ಶಿಕ್ಷಕನ ಹುದ್ದೆ ಖಾಲಿ, ಮಿಥುನ ರಾಶಿಯವರಿಗಿಲ್ಲ ಅವಕಾಶ…! ಹೀಗೊಂದು ಜಾಹೀರಾತು ನೀಡಿದ ಯುವಕ – ಕಹಳೆ ನ್ಯೂಸ್

ಬೈಕ್ ಓಡಿಸುವುದನ್ನು ಕಲಿಸಲು ಶಿಕ್ಷಕಬೇಕು, ಆತ ಮಿಥುನ ರಾಶಿಯವನಾಗಿರಬಾರದು. ಹೀಗೊಂದು ಜಾಹೀರಾತನ್ನು ವ್ಯಕ್ತಿಯೊಬ್ಬ ಆಂಗ್ಲ ಪತ್ರಿಕೆಯೊಂದರಲ್ಲಿ ನೀಡಿದ್ದಾನೆ!

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾನ್ಯವಾಗಿ ಕಂಪೆನಿಗಳಲ್ಲಿ ಉದ್ಯೋಗವಕಾಶವಿದ್ದರೆ, ಕಂಪೆನಿಗಳು ಖಾಲಿ ಹುದ್ದೆಗಳನ್ನು ಪೋಸ್ಟ್ ಮಾಡುತ್ತಾರೆ. ಅದೇ ರೀತಿ ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತಿನ ತುಣುಕನ್ನು ಲಿಂಕ್ಡ್ ಇನ್‌ನಲ್ಲಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಸದ್ಯ ಈ ಜಾಹೀರಾತು ವೈರಲ್ ಆಗಿದೆ.

ಜಾಹೀರಾತು ನೀಡಿರುವ ವ್ಯಕ್ತಿಯು ತನಗೆ ಬೈಕ್ ಕಲಿಸಲು ಶಿಕ್ಷಕರು ಬೇಕಾಗಿದ್ದಾರೆ ಎಂದು ಕೋರಿದ್ದಾನೆ. ಆದರೆ ಆತ ಬಯಸುವ ಶಿಕ್ಷಕನಿಗೆ ಹಲವು ಷರತ್ತುಗಳನ್ನೂ ವಿಧಿಸಿದ್ದಾನೆ. ’ನನ್ನ ಹೆಸರು ಪ್ರವೀಣ್‌ಭಾಯ್ ಸುದಾನಿ..ಬೈಕ್ ಓಡಿಸುವುದನ್ನು ಕಲಿಸಲು ನನಗೊಬ್ಬ ಶಿಕ್ಷಕನ ಅಗತ್ಯವಿದೆ. ಆತ ಸಭ್ಯನಾಗಿರಬೇಕು. ಅವಮಾನ ಮಾಡುವವನು ಆಗಿರಬಾರದು. ಅವಮಾನ ಆಗಲೇಬೇಕೆಂದುಕೊAಡಿದ್ದರೆ ನಾನು ನನ್ನ ತಂದೆಯ ಬಳಿಯೇ ಬೈಕ್ ಕಲಿಸಲು ಹೇಳುತ್ತಿದ್ದೆ. ಇನ್ನು ನನಗೆ ಬೈಕ್ ಕಲಿಸುವಾತ ಮಿಥುನ ರಾಶಿಯವನು ಆಗಿರಬಾರದು. ಜಾವಾ ಬಾಬರ್ ಬೈಕ್ ನನ್ನದು. ಸಿಆರ್‌ಇಡಿ ಸ್ಟೋರ್‌ನಲ್ಲಿ ಬಿಡ್‌ಬ್ಲಾಸ್ಟ್ ಆಟದಲ್ಲಿ ನಾನು ಜಯ ಗಳಿಸಿದ್ದೇನೆ. ಬೈಕ್ ಕಲಿಸಿದ್ದಕ್ಕೆ ಅನಗತ್ಯವಾಗಿ ಹೆಚ್ಚು ಹಣ ಕೇಳಬೇಡಿ ಎಂದು ಜಾಹೀರಾತುನಲ್ಲಿ ಷರತ್ತು ವಿಧಿಸಿದ್ದಾನೆ.

ಇನ್ನು ಈ ಜಾಹೀರಾತು ನೋಡಿ ಹಲವರು ನಾನಾ ರೀತಿಯ ಕಮೆಂಟ್‌ಗಳನ್ನು ಮಾಡುತ್ತಿದ್ದು, ಪೋಸ್ಟ್ ವೈರಲ್ ಆಗಿದೆ.