Monday, January 20, 2025
ಸುದ್ದಿ

ಮುಗೇರಡ್ಕದಲ್ಲಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನೀರುಪಾಲು – ಕಹಳೆ ನ್ಯೂಸ್

ಬೆಳ್ತಂಗಡಿ: ಮುಗೇರಡ್ಕದಲ್ಲಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ನದಿನೀರಿನಲ್ಲಿ ನಾಪತ್ತೆಯಾದ ಘಟನೆ ಸೋಮವಾರ ರಾತ್ರಿಯ ವೇಳೆ ನಡೆದಿದ್ದು, ಆತನಿಗಾಗಿ ನದಿಯಲ್ಲಿ ಮುಳುಗು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಗ್ರು ಗ್ರಾಮದ ನಿವಾಸಿ ‌ಜನಾರ್ಧನ (42) ಎಂಬವರೇ ನಾಪತ್ತೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಇವರು ತಮ್ಮ ಸ್ನೇಹಿತ ಮಹೇಶ್ ಎಂಬವರೊಂದಿಗೆ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ನದಿಗಿಳಿದ ಜನಾರ್ಧನ ಅವರು ನೀರಿನಲ್ಲಿ ನಾಪತ್ತೆಯಾಗಿದ್ದರು. ಆದರೆ ಯಾವುದೇ ಹುಡುಕಾಟಕ್ಕೆ ಮುಂದಾಗದೆ ಅಲ್ಲಿ ಸ್ಥಳೀಯರಿಗೂ ಮಾಹಿತಿ ನೀಡಿದೆ ಮಹೇಶ್ ನೇರವಾಗಿ ಜನಾರ್ಧನನ ಮನೆಗೆ ಹೋಗಿ ಆತ ನೀರಿನಲ್ಲಿ ಮುಳುಗಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಬಳಿಕ ಸ್ಥಳೀಯರು ಈ ಬಗ್ಗೆ ಮಾಹಿತಿ ಪಡೆದು ಮುಳುಗು ತಜ್ಞರ ಸಹಕಾರದೊಂದಿಗೆ ನದಿಯಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಮಂಗಳವಾರ ಬೆಳಿಗ್ಗೆಯೂ ಹುಡುಕಾಟ ಮುಂದುವರಿದಿದೆ.